‘ಪ್ರತಾಪ್ ಸಿಂಹ ಸುಳ್ಳಿನ ಸರದಾರ’-ವಿನಯ್ ಕುಲಕರ್ಣಿ

Kannada News

23-10-2017

ಧಾರವಾಡ: ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ, ಎರಡು ದಿನಗಳ ಕಾಲ, ಬೆಳಗಾವಿ ವಿಭಾಗ ಮಟ್ಟದ ಸೌಲಭ್ಯಗಳ ವಿತರಣಾ ಸಮಾವೇಶ ಹಾಗೂ ಮಾಹಿತಿ ಉತ್ಸವ ನಡೆಯಲಿದ್ದು, ಉತ್ಸವದ ಅಂಗವಾಗಿ ಆವರಣದಲ್ಲಿರುವ ಸರಕಾರದ ಯೋಜನೆಗಳ ಕುರಿತು ಸಾರಂಶ ಹೇಳುವ ಮಳಿಗೆಗಳ ಸಚಿವ ವಿನಯ್ ಕುಲಕರ್ಣಿ ಚಾಲನೆ ನೀಡಿದರು.

ಸರಕಾರದ ಸಾಧನೆ ಮತ್ತು ಯೋಜನೆಗಳ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಉತ್ಸವ ನಡೆಯಲ್ಲಿದೆ. ಬೆಳಗಾವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಕಾರವಾರ, ಗದಗ ಹಾಗೂ ಹಾವೇರಿ ಜಿಲ್ಲೆಯ ಮಾಹಿತಿ ಮಳಿಗೆಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರದಿಂದ ಅನುಷ್ಠಾನಗೊಂಡಿರುವ ಅಭಿವೃದ್ಧಿ ಯೋಜನೆಗಳ ವಿವರಗಳನ್ನೊಳಗೊಂಡ ಮಾಹಿತಿ ಫಲಕ ಹಾಗೂ ದೃಶ್ಯಾವಳಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತಿದೆ.

ಈ ವೇಳೆ ಮಾತನಾಡಿದ ಸಚಿವ ವಿನಯ ಕುಲಕರ್ಣಿ, ಸಂಸದ ಪ್ರಹ್ಲಾದ್ ಜೋಶಿಗೆ ಸುಳ್ಳಿನ ಸರದಾರ್ ಅಂತಾ ಪ್ರಶಸ್ತಿ ಕೊಡೊದೊಂದೆ ಈಗ ಬಾಕಿ ಇದೆ. ಇಷ್ಟು ದಿನ ಮೋದಿ ಸರ್ಕಾರ ಸಹಿಸಿಕೊಂಡಿದ್ದ ಜನ ಈಗ ಟೀಕೆ ಮಾಡಲು ಶುರುಮಾಡಿದ್ದಾರೆ. ಮೋದಿ ನಮ್ಮ ರಾಜ್ಯಕ್ಕೆ ಬಂದು ಅದೇನ್ ಸಾಧನೆ ಹೇಳುತ್ತಾರೋ ಗೊತ್ತಿಲ್ಲ. ವಿದೇಶ ಸುತ್ತಿರುವುದು, ನೋಟ ಬ್ಯಾನ್, ಜಿಎಸ್‌ಟಿಯನ್ನು ಸಾಧನೆ ಅಂತ ಹೇಳಿಕೊಳ್ಳಬಹುದು ಅದರಿಂದ ಕಾಂಗ್ರೆಸ್‌ ಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ