ಇಬ್ಬರ ಪ್ರಾಣ ತೆಗೆದ ಲಾರಿ !

Kannada News

23-10-2017

ಬೆಂಗಳೂರು: ರಸ್ತೆ ದಾಟುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಲಾರಿಯೊಂದು ಹರಿದ ಪರಿಣಾಮ ಸ್ಥಳದಲ್ಲೇ ಇಬ್ಬರೂ, ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.  ಮೃತರನ್ನು ವೆಲ್ಲಾಚಿ (70) ಹಾಗೂ ವಸಂತಾ (45) ಎಂದು ಗುರುತಿಸಲಾಗಿದೆ. ಮೃತರು ತಮಿಳುನಾಡಿನ ಮೂಲದವರು ಎಂದು ಹೇಳಲಾಗಿದೆ. 

ದೀಪಾವಳಿಯ ಪ್ರಯುಕ್ತ ತಮಿಳುನಾಡಿಗೆ ತೆರಳಿದ್ದ ಈ ಇಬ್ಬರು ಮಹಿಳೆಯರು, ಇಂದು ನಗರಕ್ಕೆ ವಾಪಾಸಾಗಿದ್ದರು. ಊರಿನಿಂದ ಹಿಂದಿರುಗಿದ ಅವರು, ಬಾಣಸವಾಡಿಯ ಬಾಬುಸಾಪಾಳ್ಯದ ಬಳಿ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದು ಇಬ್ಬರ ಮೇಲೂ ಹರಿದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. . ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ