ಕುಡಿದು ರಂಪಾಟ: ಕಂಬಿ ಹಿಂದೆ ವಿದ್ಯಾರ್ಥಿಗಳು

Kannada News

21-10-2017

ಬೆಂಗಳೂರು: ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿ, ಗಲಾಟೆ ಮಾಡಿ ರಂಪಾಟ ಮಾಡುತ್ತಿದ್ದನ್ನು ಪ್ರಶ್ನಿಸಿದವರ ಮೇಲೆ ಹಲ್ಲೆಗೆ ಮುಂದಾದ ವಿದ್ಯಾರ್ಥಿಗಳನ್ನು ಸ್ಥಳೀಯರೇ ಹಿಡಿದು ಧರ್ಮದೇಟು ಕೊಟ್ಟು ಮೈಕೋ ಲೇಔಟ್ ಪೊಲೀಸರಿಗೆ ಒಪ್ಪಿಸಿದ್ದಾರೆ

ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆವರೆಗೆ ಗುಂಡು ಪಾರ್ಟಿ ನಡೆಸಿದ ಉತ್ತರ ಭಾರತ ಮೂಲದ ವಿದ್ಯಾರ್ಥಿಗಳು, ಮನೆಯೊಂದರ ಟೆರೇಸ್ ಮೇಲೆ ಹೆಚ್ಚು ಸೌಂಡ್ ಕೊಟ್ಟು ಮ್ಯೂಸಿಕಲ್ ಪಾರ್ಟಿ ನಡೆಸುತ್ತಿದ್ದರು. ಈ ವೇಳೆ ಪ್ರಶ್ನಿಸಲು ಹೋದ ಸ್ಥಳೀಯರ ಮೇಲೆ ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿದೆ. ಇಷ್ಟೇ ಅಲ್ಲದೇ ಕುಡಿದ ಮತ್ತಿನಲ್ಲಿ ಪ್ರಶ್ನಿಸಲು ಹೋದ ಮಹಿಳೆಯನ್ನು ಟೆರೇಸ್ ಮೇಲಿಂದ ತಳ್ಳಲೂ ಕೂಡ ಯತ್ನಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯರು ಕೇಳಿದ್ದಕ್ಕೆ ದೀಪಾವಳಿ ಮಾಡ್ತಿದ್ದೀವಿ ಎಂದು ದಾರಿ ತಪ್ಪಿಸಲು ಯತ್ನಿಸಿದ್ದಾರೆ.

ರಾತ್ರಿಯಿಡೀ ನಿದ್ರೆ ಮಾಡಲು ಬಿಡದ ಯುವಕ ಯುವತಿಯರ ಗುಂಪನ್ನು ಮನೆಯೊಂದರಲ್ಲಿ ಕೂಡಿಹಾಕಿ ನಂತರ ಪೊಲೀಸರ ವಶಕ್ಕೆ ಸ್ಥಳೀಯರು ಒಪ್ಪಿಸಿದ್ದಾರೆ. ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Kannada news Karnataka ಕುಡಿದು ಪಾರ್ಟಿ ಧರ್ಮದೇಟು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ