ಗೌರಿ ಹತ್ಯೆ: 'ತನಿಖೆ ಕೈಬಿಟ್ಟಿಲ್ಲ'

Kannada News

21-10-2017

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ)ಮುಂದುವರೆಸಿದ್ದು, ತನಿಖೆಯನ್ನು ಕೈಬಿಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ಕೈಬಿಟ್ಟ ವಿಚಾರ ಸುಳ್ಳು, ತನಿಖಾಧಿಕಾರಿಗಳು ಈಗಲೂ ವಿವಿಧ ಆಯಾಮಗಳಲ್ಲಿ ಹಂತಕರ ಪತ್ತೆ ಕಾರ್ಯ ನಡೆಸುತ್ತಿದ್ದು, ಆರೋಪಿಗಳ ಬಗೆಗಿನ ಮಾಹಿತಿಯೂ ದೊರೆತಿದೆ ಎಂದು ಹೇಳಿದರು.

ಯಾವುದೇ ಗಂಭೀರ ಪ್ರಕರಣಗಳು ನಡೆದಾಗ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗುತ್ತದೆ. ಇನ್ನು ಗೌರಿ ಲಂಕೇಶ್ ಪ್ರಕರಣದಲ್ಲಿ ಹಲವು ಅಧಿಕಾರಿಗಳು ತನಿಖೆಯಲ್ಲಿ ಶ್ರಮ ಹಾಕಿದ್ದು, ಹಂತಕರ ಬಂಧನ ಆಗಲಿದೆ ಎಂದರು. ತನಿಖೆಯ ಮಾಹಿತಿಯು ತನಿಖಾಧಿಕಾರಿಗಳ ಬಳಿಯಿದ್ದು, ಇದರ ಬಗ್ಗೆ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ,  ಮಾಹಿತಿ ನೀಡಿದರೆ ತನಿಖೆಯ ದಾರಿ ತಪ್ಪುಬಹುದು ಎಂದು ಅವರು ಹೇಳಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ