ನೀವು ಬುದ್ಧಿವಂತರೇ..? ಹಾಗಿದ್ರೆ ಹುಷಾರ್…!

Kannada News

21-10-2017

ಜಗತ್ತಿನಲ್ಲಿ ಇತರೆ ಜನರಿಗಿಂತಲೂ ಬುದ್ಧಿವಂತರಲ್ಲಿ ಮಾನಸಿಕ ಸಮಸ್ಯೆ ಹೆಚ್ಚು ಅನ್ನುವ ವಿಚಾರ ಇತ್ತೀಚಿನ ಒಂದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಬುದ್ಧಿವಂತಿಕೆ ಮತ್ತು ಮಾನಸಿಕ ಸಮಸ್ಯೆಗಳಿಗೆ ನೇರ ಸಂಬಂಧ ಇದ್ದು, ಬುದ್ಧಿಜೀವಿಗಳು ಮಾನಸಿಕ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆಗಳು ಸಾಮಾನ್ಯ ಜನರಿಗಿಂತಲೂ ಎರಡುಪಟ್ಟು ಹೆಚ್ಚು ಅನ್ನುವುದು ಈ ಸಂಶೋಧನೆಯ ಸಾರಾಂಶ.

ಇದರ ಜೊತೆಗೆ, ಬುದ್ಧಿವಂತರು ಇತರೆಯವರಿಗಿಂತಲೂ ಹೆಚ್ಚು ಆತಂಕ ಮತ್ತು ದೈಹಿಕ ಸಂಕಟ ಅನುಭವಿಸುತ್ತಾರೆ ಅನ್ನುವುದೂ ಕೂಡ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಟೈಜರ್ ಕಾಲೇಜಿನ ವತಿಯಿಂದ ಕೈಗೊಳ್ಳಲಾದ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಬುದ್ಧಿವಂತರೇ ಅಸ್ತಮಾ, ಅಲರ್ಜಿಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಮತ್ತು ಅವರಲ್ಲಿ ರೋಗನಿರೋಧಕ ಶಕ್ತಿಯೂ ಕಡಿಮೆ ಇರುತ್ತದೆಂದು ಈ ಸಂಶೋಧನೆ ಹೇಳುತ್ತದೆ.

ಬುದ್ಧಿವಂತ ವ್ಯಕ್ತಿಗಳು ತುಂಬಾ ಸೂಕ್ಷ್ಮ ಮನೋಭಾವದವರಾಗಿದ್ದು, ತಮ್ಮ ಸುತ್ತಲಿನ ಜಗತ್ತಿನ ಬಗ್ಗೆ ಮತ್ತು ಸಾಮಾಜಿಕ ನಡೆನುಡಿಗಳ ಬಗ್ಗೆ ತುಂಬಾ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಇವರು, ಎಲ್ಲವನ್ನೂ ವಿಶ್ಲೇಷಣೆ ಮಾಡಲು ಮುಂದಾಗುವುದರಿಂದ, ಅವರಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ಹೇಳಲಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ