ಕೆರೆಯಲ್ಲಿ ಕಾದಿದ್ದ ಸಾವು

Kannada News

21-10-2017

ಚಿತ್ರದುರ್ಗ: ಈಜಲು ಕೆರೆಗೆ ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆಯು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ. ಹೆಗ್ಗೆರೆ ಗ್ರಾಮದ ಕೆಂಪರಾಜ್ (14), ಕಾಂತರಾಜ್ (14) ಹಾಗು ಮಹಾಂತೇಶ್ ನೀರುಪಾಲಾದ ಬಾಲಕರು. ನಿನ್ನೆ ಮಧ್ಯಾಹ್ನ ಈಜಲು ತೆರಳಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಗ್ನಿ ಶಾಮಕದಳ ಹಾಗೂ ಹೊಸದುರ್ಗ ಪೊಲೀಸರು ಶವಗಳಿಗೆ ಶೋಧಕಾರ್ಯ ನಡೆಸಿದ್ದು, ಇಂದು ಬೆಳಗ್ಗೆ ಮೂವರು ಬಾಲಕರ ಶವ ಪತ್ತೆಯಾಗಿವೆ. ಬಾಲಕರನ್ನು ಕಳೆದುಕೊಂಡ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ