ಲಾರಿ ಪಲ್ಟಿ 11 ಸಾವು

Kannada News

21-10-2017

ವಿಜಯಪುರ: ಟೈಲ್ಸ್ ತುಂಬಿದ ಲಾರಿ ಪಲ್ಟಿಯಾಗಿ ಓರ್ವ ಬಾಲಕ ಸೇರಿ 11 ಜನ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಮೂಲತಃ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಇಂದಿರಾಬಾಯಿ ನಿಂಬಾಳಕರ (30), ಪರಶುರಾಮ ಪೂಜಾರಿ (30), ಬಸಮ್ಮ ಪೂಜಾರಿ (25), ರೂಪೇಶ್ (25), ಸಂತೋಷ (19), ಅಶೋಕ್ ಬಿರಾದಾರ (50), ಲಕ್ಷ್ಮಿ ಬಾಯಿ ಮಾದರ (30), ಲಕ್ಷ್ಮಣ ಮಾದರ (30), ಬೇಬಿ ಶೇಖ್ (49) ಸಾಹೇಬಣ್ಣ (65) ಹಾಗೂ ನಾಗಪ್ಪ ನಿಂಬಾಳಕರ(8) ಮೃತ ದುರ್ದೈವಿಗಳು.

ಇಂದು ಮುಂಜಾನೆ ಸುಮಾರು 3 ಗಂಟೆಗೆ ಸಾಂಗ್ಲಿಯ ಟಸ್ಗಾನ್-ಕವಾಥೆ ಮಹನ್ಕಾಲ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಲಾರಿಯ ಚಾಲಕ, ಮನೆರಾಜುರಿ ಗ್ರಾಮದ ಸಮೀಪ ತನ್ನ ನಿಯಂತ್ರಣ ಕಳೆದುಕೊಂಡ ಪರಿಣಾಮ ಲಾರಿ ಪಲ್ಟಿ ಹೊಡೆದಿದ್ದು, ಟೈಲ್ಸ್ ಕೆಳಗೆ ಕಾರ್ಮಿಕರು ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ರಕ್ಷಣೆ ಮಾಡಿ ಸಮೀಪದ ಮೀರಜ್ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸಾಂಗ್ಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಲಾರಿ ಪಲ್ಟಿ ಮಹಾರಾಷ್ಟ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ