ಬಿಜೆಪಿ ಒಗ್ಗಟ್ಟಿನ ಮಂತ್ರ !

Kannada News

21-10-2017 190

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಬಂಗಾರಪೇಟೆ ಮೀಸಲು ಕ್ಷೇತ್ರದ ಬಿಜೆಪಿ ಪಕ್ಷದ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಹೈಕಮ್ಯಾಂಡ್ ಆದೇಶಕ್ಕೆ ತಲೆ ಬಾಗಿ ಯಾರಿಗೇ ಟಿಕೆಟ್ ನೀಡಿದರು ತಾವು ಒಗ್ಗಟ್ಟಿನಿಂದ ಶ್ರಮಿಸಿ ಪಕ್ಷದ ಗೆಲುವಿಗೆ ಬದ್ಧ ಎಂದು ಕಾರ್ಯಕರ್ತರ ಮುಂದೆ ಪ್ರಮಾಣ ಮಾಡಿದರು.

ಪಟ್ಟಣದ ವಿಬಿಆರ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ನವ ಕರ್ನಾಟಕ 'ಪರಿವರ್ತನಾ ರ‍್ಯಾಲಿ' ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ತಮ್ಮಿಬ್ಬರಲ್ಲಿ ಯಾರಿಗೇ ಬಿಜೆಪಿ ಟಿಕೇಟ್ ನೀಡಿದರೂ ತಾವು ಒಗ್ಗಟ್ಟಿನಿಂದ ಇರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟಿಕೆಟ್ ಆಕಾಂಕ್ಷಿಗಳು ಎದ್ದು ನಿಂತು, ಒಬ್ಬರೊಬ್ಬರ ಕೈಗಳನ್ನು ಮೇಲಕ್ಕೆ ಎತ್ತಿ ತಮ್ಮಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಲು ಶಕ್ತಿಮೀರಿ ದುಡಿಯುವುದಾಗಿ ತಿಳಿಸಿದರು. ನವೆಂಬರ್ 2 ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ನವ ಕರ್ನಾಟಕ’ ನಿರ್ಮಾಣ ಕಾರ್ಯಕ್ರಮಕ್ಕೆ ಪ್ರತಿ ಮತಗಟ್ಟೆ ಕೇಂದ್ರದಿಂದ 3 ಬೈಕ್ ಸೇರಿ ಒಟ್ಟು 254 ಮತ ಗಟ್ಟೆಗಳಿಂದ 762 ಬೈಕ್‍ಗಳಿಂದ ಹೊರಡಲು ತೀರ್ಮಾನಿಸಲಾಯಿತು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ