ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಭುಗುಲೆದ್ದ ಚುನಾವಣಾ ವೈಷಮ್ಯ

Kannada News

31-03-2017

ಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಭುಗುಲೆದ್ದ ಚುನಾವಣಾ ವೈಷಮ್ಯ ಹಿನ್ನೆಲೆ  ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಕಲ್ಲುತೂರಾಟ. ನಂಜನಗೂಡು ತಾಲ್ಲೂಕಿನ ರಾಜೂರು ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿರುವ ಘಟನೆ. ಕಳೆದ ರಾತ್ರಿ ನಟ ಜಗ್ಗೇಶ್ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸುವುದಕ್ಕೂ ಮುನ್ನಾ ನಡೆದಿರುವ ಘಟನೆ. ಕಲ್ಲು ತೂರಾಟದ ವೇಳೆ ಇಬ್ಬರಿಗೆ ಗಾಯ. ರಾಜೂರು ಗ್ರಾಮದ ಬಸವರಾಜು, ಚಿನ್ನಮ್ಮ ಎಂಬುವರಿಗೆ ಗಾಯವಾಗಿದ್ದು, ಇಬ್ಬರು ಗಾಯಾಳುಗಳಿಗೆ ನಂಜನಗೂಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಾಜೂರು ಗ್ರಾಮ. ಅಹಿತಕರ ಘಟನೆ ಹಿನ್ನೆಲೆಯಲ್ಲಿ ರಾಜೂರು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿರುವ ಪೊಲೀಸ್ ಇಲಾಖೆ.

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ