‘ಗುಜರಾತ್ ಎಲೆಕ್ಷನ್ ದಿನಾಂಕ ಘೋಷಿಸಿಲ್ಲ ಯಾಕೆ’..?

Kannada News

21-10-2017

ಬೆಂಗಳೂರು: ಕೇದಾರನಾಥ್ ಪ್ರಕೃತಿ ವಿಕೋಪದ ವೇಳೆ ಅಂದಿನ ಯುಪಿಎ ಕೇಂದ್ರ ಸರ್ಕಾರ ಏನು ಮಾಡಲಿಲ್ಲ ಅಂತಾ ಪ್ರಧಾನಿ ಮೋದಿ ಹೇಳಿರೋದು ಸರಿಯಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ಹರಿಹಾಯ್ದಿದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಖರ್ಗೆ ಅವರು, ಅಂದು ನಾನು ರೈಲ್ವೇ ಮಂತ್ರಿಯಾಗಿದ್ದೆ, ಮೋದಿ ಗುಜರಾತ್ ಸಿಎಂ ಆಗಿ ಗುಜರಾತ್ ಜನತೆಗೆ ತೊಂದರೆಯಾಗಿದೆ ಅಂದಾಗ ನಾನೇ ಎರಡು ರೈಲುಗಳನ್ನು ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟೆ. ಇದು ಇಂದು ಉದಾಹರಣೆ ಅಷ್ಟೇ.

ಆದ್ರೆ ಮೋದಿ ಹೇಳಿದ್ದನ್ನ ಮಾಡಲ್ಲ. ಹಿಂದಿನವರು ಸಾಕಷ್ಟು ಸಾಧನೆ ಮಾಡಿರುವ ಕಾರಣದಿಂದ ದೇಶ ಇಂದು ಈ ಸ್ಥಿತಿಯಲ್ಲಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಆದ್ರೆ ಮೋದಿ ಕೇವಲ ಸುಳ್ಳು ಹೇಳುತ್ತಿದ್ದಾರೆ ಎಂದರು.

ಇದೇ ವೇಳೆ ಹಿಮಾಚಲ ಪ್ರದೇಶ ರಾಜ್ಯದ ಚುನಾವಣೆ ತರಾತುರಿಯಲ್ಲಿ ಘೋಷಣೆಯಾಗುತ್ತದೆ. ಆದ್ರೆ ಗುಜರಾತ್ ಚುನಾವಣೆ ದಿನಾಂಕವನ್ನ ಮಾತ್ರ ಘೋಷಣೆ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಖರ್ಗೆ, ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ, ಜಿಎಸ್ ಟಿ ಕಡಿಮೆ ಮಾಡಲಿಕ್ಕೆ ಸಂಸತ್ತಿನಲ್ಲಿ ಒತ್ತಾಯ ಮಾಡಿದರೂ ಸ್ಪಂದಿಸಲಿಲ್ಲ, ಈಗ ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಜಿಎಸ್ ಟಿ ಕಡಿಮೆ ಮಾಡಲು ಮೋದಿ ಹೊರಟಿದ್ದಾರೆ ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ