ಬೆದರಿಸಿ ದರೋಡೆ: ಕುಖ್ಯಾತ ಕಳ್ಳರು ಅಂದರ್ !

Kannada News

21-10-2017

ಬೆಂಗಳೂರು: ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ಲ್ಯಾಪ್‍ಟಾಪ್, ಚಿನ್ನದ ಸರ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ ಇಬ್ಬರು, ಕುಖ್ಯಾತ ಕಳ್ಳರನ್ನು ಬಂಧಿಸಿರುವ ಕೋರಮಂಗಲ ಪೊಲೀಸರು 5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹಳೇ ಗುಡ್ಡದ ಹಳ್ಳಿಯ ವಸೀಂಖಾನ್ ಅಲಿಯಾಸ್ ವಸೀಂ (20), ಸಾಧಿಕ್ (24) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳ ಬಂಧನದಿಂದ ಕೋರಮಂಗಲದ ಸುಲಿಗೆ, ಹೆಚ್.ಎಸ್.ಆರ್ ಲೇಔಟ್, ಜೆಪಿ ನಗರ, ತಿಲಕ್‍ ನಗರ ತಲಾ 1 ಸರ ಅಪಹರಣ ಸೇರಿ 5 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ಆರೋಪಿಗಳು ಕಳೆದ ಕಲ ದಿನಗಳ ಹಿಂದೆ ಕೋರಮಂಗಲದ ಸೆಂಟ್‍ ಜಾನ್ ಬಸ್‍ ಸ್ಟಾಪ್ ಬಳಿ ನಡೆದು ಹೋಗುತ್ತಿದ್ದ ಪ್ರಭಾಕರ್ ಎಂಬುವರಿಗೆ ಚಾಕು ತೋರಿಸಿ ಲ್ಯಾಪ್‍ಟಾಪ್, ಮೊಬೈಲ್ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ ಕೋರಮಂಗಲ ಪೊಲೀಸರು ಆರೋಪಿಗಳನ್ನು ಬಂಧಿಸಿ 5 ಲಕ್ಷ ಮೌಲ್ಯದ 4 ಚಿನ್ನದ ಸರಗಳು, 1 ಮೊಬೈಲ್, 1 ಬೈಕ್‍ನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಲ್ಯಾಪ್‍ಟಾಪ್, ಕೋರಮಂಗಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ