ಪೈಪ್ ಕಳ್ಳರ ಬಂಧನ !

Kannada News

21-10-2017

ತೋಟವೊಂದರಲ್ಲಿ ಪಂಪ್ ಸೆಟ್ ಪೈಪ್ ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯು ಮಂಡ್ಯದ ಬೆಳಕವಾಡಿಯಲ್ಲಿ ನಡೆದಿದೆ. ಮೈಸೂರಿನ ರಾಜೀವ್ ನಗರದ ಶೇಖ್ ಜಮೀಲ್ ಪಾಷ ಮತ್ತು ಮಳವಳ್ಳಿಯ ಜಮೀರ್ ಪಾಷ ಬಂಧಿತ ಆರೋಪಿಗಳು. ರಾತ್ರಿ ಸಮಯದಲ್ಲಿ ಪಂಪ್ ಸೆಟ್ ಕಳವು ಮಾಡುತ್ತಿದ್ದ ಇವರ ಮೇಲೆ ಗ್ರಾಮಸ್ಥರು ದೂರು ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂತ 95 ಸಾವಿರ ಮೌಲ್ಯದ ಪಂಪ್ ಸೆಟ್ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ