ರಾಜ್ಯ ಪ್ರವಾಸಕ್ಕೆ ಪಕ್ಷಗಳ ಪೈಪೋಟಿ !

Kannada News

21-10-2017

ಬೆಂಗಳೂರು: ಹೊಸ ವರ್ಷದಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸಜ್ಜಾಗುತ್ತಿದ್ದು, ನವೆಂಬರ್ 1ರಿಂದ ಜನವರಿ 15ರವರೆಗಿನ ಅವಧಿಯಲ್ಲಿ  ಎಲ್ಲ ಪಕ್ಷಗಳ ನೇತಾರರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಪ್ರತ್ಯೇಕವಾಗಿ ಯೋಜನೆ ರೂಪಿಸಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ 15ರಿಂದ ಜನವರಿ 15ರವರೆಗೂ ಒಂದು ತಿಂಗಳ ಕಾಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಲಿದ್ದು, ಎಲ್ಲ ವಿಧಾನಸಭೆ ಕ್ಷೇತ್ರಗಳಿಗೂ ಭೇಟಿ ನೀಡಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲು ಕೆಪಿಸಿಸಿ ಯೋಜನೆ ರೂಪಿಸಿದೆ. ಚಾಮರಾಜನಗರ ಜಿಲ್ಲೆಯಿಂದ ಡಿಸೆಂಬರ್ 15ರಂದು  ಸಿದ್ದರಾಮಯ್ಯ ರಾಜ್ಯ ಪ್ರವಾಸ ಆರಂಭಿಸಲಿದ್ದು,  ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡಲಿದ್ದಾರೆ.  ಬೀದರ್ ನಲ್ಲಿ ರಾಜ್ಯ ಪ್ರವಾಸ ಕೊನೆಗೊಳ್ಳಲಿದ್ದು, ಬೃಹತ್ ಸಮಾವೇಶ ನಡೆಸಲು ಯೋಜಿಸಿದ್ದಾರೆ.  ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಶಾಸಕರು, ಸಂಸದರು ಸಿದ್ದರಾಮಯ್ಯ ಅವರೊಂದಿಗೆ ಇರಲಿದ್ದಾರೆ.

ಇನ್ನು ಬಿಜೆಪಿ ನವೆಂಬರ್ 2ರಂದು `ನವ ಕರ್ನಾಟಕ ಪರಿವರ್ತನಾ ಯಾತ್ರೆ' ಆರಂಭಿಸಲಿದ್ದು,  ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಾತ್ರೆಗೆ ಬೆಂಗಳೂರಿನಲ್ಲಿ  ಚಾಲನೆ ನೀಡಲಿದ್ದಾರೆ. ನವೆಂಬರ್ 1ರಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೈ ಟೆಕ್ ಬಸ್ ಮೂಲಕ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.

ರಾಜ್ಯ ಚುನಾವಣೆ ಗೆಲ್ಲಲು ಜೆಡಿಎಸ್ ಭರದ ಸಿದ್ಧತೆ ಕೈಗೊಂಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ  ಹೆಚ್‍.ಡಿ ಕುಮಾರಸ್ವಾಮಿ ಅವರ ಚುನಾವಣಾ ಪ್ರಚಾರಕ್ಕಾಗಿ ಹೈಟೆಕ್ ಬಸ್ ನಿರ್ಮಾಣವಾಗಿದೆ.

2018ರ ಚುನಾವಣಾ ಪ್ರಚಾರಕ್ಕೆ ಹೆಚ್ಚು ಕಡಿಮೆ ಒಂದು ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಹೈಟೆಕ್ ಬಸ್ ಸಿದ್ಧವಾಗಿದೆ. ತಮಿಳುನಾಡಿನಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಅಶೋಕ ಲೈಲೆಂಡ್ ಬಸ್ಸನ್ನು ಮಾಡಿಫೈ ಮಾಡಲಾಗಿದೆ. ಈ ಹೈಟೆಕ್ ಬಸ್ ತಯಾರಿಕೆ ಜುಲೈನಲ್ಲಿಯೇ ಆರಂಭವಾಗಿದ್ದು, ಮುಂದಿನ ತಿಂಗಳು ನವೆಂಬರ್ ನಲ್ಲಿ ಈ ಬಸ್‍ ಗೆ ಚಾಲನೆ ನೀಡಲಾಗುತ್ತದೆ.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕಾಗಿ ಹೈಟೆಕ್? ಬಸ್? ಬಳಕೆಗೆ ಎಚ್ಡಿಕೆ ಮುಂದಾಗಿದ್ದಾರೆ. ಈ ಬಸ್ ಮಿನಿ ಮನೆಯಂತೆಯೇ ಇದ್ದು, ಹೈಡ್ರಾಲಿಕ್ ಬಳಸಿ ಲಿಫ್ಟ್  ಮೂಲಕ ಭಾಷಣ ಮಾಡಲು ಈ ಬಸ್?ನಲ್ಲಿ ವ್ಯವಸ್ಥೆ ಇದೆ. ಜೊತೆಗೆ ಇದರಲ್ಲಿ ಒಂದು ಕೊಠಡಿಯಿದ್ದು, ಪ್ರತ್ಯೇಕ ಶೌಚಗೃಹವಿದೆ. ಬಸ್ ನಲ್ಲಿ ಐದಾರು ಜನರು ಕುಳಿತು ಚರ್ಚೆ ನಡೆಸಲೂ ಸಹ ಪ್ರತ್ಯೇಕ ವ್ಯವಸ್ಥೆ ಇದೆ. ಈ ಬಸ್‍ನಲ್ಲಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರವನ್ನು ಮಾಡಲಿದ್ದು, ಗ್ರಾಮ ವಾಸ್ತವ್ಯ ಸೇರಿದಂತೆ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದಾರೆ. ಮೊದಲಿಗೆ ಮೈಸೂರಿನ ಚಾಮುಂಡೇಶ್ವರಿ ತಾಯಿಗೆ ನಮಿಸಿ ನಂತರ ಪ್ರಚಾರವನ್ನು ಆರಂಭಿಸುತ್ತಾರೆ ಎನ್ನಲಾಗಿದೆ.

ಕೈ ಕೂಡಾ ಆಖಾಡಕ್ಕೆ 2018ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕರ್ನಾಟಕ ಕಾಂಗ್ರೆಸ್ ರಾಜ್ಯ ಪ್ರವಾಸದ ಯೋಜನೆ ರೂಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ತಿಂಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಡಿಸೆಂಬರ್‍ ನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಹಿಂದೆಯೇ ಘೋಷಣೆ ಮಾಡಿದ್ದರು. ಈಗ ರಾಜ್ಯ ಪ್ರವಾಸದ ದಿನಾಂಕ ಘೋಷಣೆಯಾಗಿದೆ. ಡಿಸೆಂಬರ್ 15ರಿಂದ ಜನವರಿ 15ರ ತನಕ ಸಿದ್ದರಾಮಯ್ಯ ರಾಜ್ಯ ಪ್ರವಾಸ ಮಾಡಲಿದ್ದಾರೆ.

ಡಿಸೆಂಬರ್ 15ರಂದು ಚಾಮರಾಜನಗರ ಜಿಲ್ಲೆಯಿಂದ ಸಿದ್ದರಾಮಯ್ಯ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಅವರು ಭೇಟಿ ನೀಡಲಿದ್ದು, ಬೀದರ್‍ ನಲ್ಲಿ ರಾಜ್ಯ ಪ್ರವಾಸ ಅಂತ್ಯಗೊಳಿಸಿ, ಬೃಹತ್ ಸಮಾವೇಶ ನಡೆಸುವ ಸಾಧ್ಯತೆ ಇದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು, ಸಂಸದರು ಸಿದ್ದರಾಮಯ್ಯ ಅವರ ಜೊತೆ ಜನರನ್ನು ಭೇಟಿ ಮಾಡಲಿದ್ದಾರೆ. ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲಿರುವ ಸಿದ್ದರಾಮಯ್ಯ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ.

ಬಿಜೆಪಿ ಯಾತ್ರೆ : ಕರ್ನಾಟಕ ಬಿಜೆಪಿ ನವೆಂಬರ್ 2ರಂದು 'ನವ ಕರ್ನಾಟಕ ಪರಿವರ್ತನಾ ಯಾತ್ರೆ' ಆರಂಭಿಸಲಿದೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ.ಅತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನವೆಂಬರ್ 1ರಿಂದ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಕುಮಾರಸ್ವಾಮಿ ಅವರ ಪ್ರವಾಸಕ್ಕಾಗಿಯೇ ಹೈಟೆಕ್ ಬಸ್ ಸಿದ್ಧವಾಗುತ್ತಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ