ಸಿಲಿಂಡರ್ ಸ್ಪೋಟ: ಮನೆ ಛಿದ್ರ-ಛಿದ್ರ !

Kannada News

19-10-2017

ಬೆಂಗಳೂರು: ಅಡುಗೆ ಸಿಲಿಂಡರ್ ಸ್ಪೋಟಗೊಂಡು ತಾಯಿ-ಮಗ ಗಂಭೀರ ಗಾಯಗೊಂಡಿರುವ ಘಟನೆ ಆನೇಕಲ್ ಪಟ್ಟಣದ ಮರಿಯಪ್ಪ ಬಡಾವಣೆಯಲ್ಲಿ ನಡೆದಿದೆ.

ಗಾಯಾಳುಗಳು ಜಯಮ್ಮ(55) ಸತೀಶ್ (22) ಎಂದು ತಿಳಿದು ಬಂದಿದ್ದು, ಅವರನ್ನು ಚಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಜಯಮ್ಮ ಎಂಬವರ ಮನೆಯಲ್ಲಿ  ಗ್ಯಾಸ್ ಲೀಕ್ ನಿಂದಾಗಿ ಸಿಲಿಂಡರ್ ಸ್ಟೋಟಗೊಂಡು ಮನೆಯ ಕಿಟಕಿ, ಬಾಗಿಲುಗಳು ಛಿದ್ರ ಛಿದ್ರಗೊಂಡಿವೆ. ಸ್ನಾನಕ್ಕೆ ನೀರು ಇಡುವ ವೇಳೆ ಗ್ಯಾಸ್ ಹಚ್ಚಲು ಹೋದಾಗ ದುರ್ಘಟನೆ ಸಂಭವಿಸಿದೆ. ಇನ್ನು ಸ್ಥಳಕ್ಕೆ ಆನೇಕಲ್ ನ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ