ದೆಹಲಿಯಲ್ಲಿ ಸದ್ದು ಮಾಡದ ಪಟಾಕಿ…!

Kannada News

19-10-2017

ನವದೆಹಲಿ: ದೇಶದೆಲ್ಲೆಡೆ ಸಂಭ್ರಮದ ದೀಪಾವಳಿ ಆಚರಣೆ ನಡೆಯುತ್ತಿದೆ. ಆದರೆ, ಈ  ಬಾರಿ ಪಟಾಕಿಗಳ ಸದ್ದು ತುಸು ಕಡಿಮೆ ಅಂತಲೇ ಹೇಳಬಹುದು. ದೆಹಲಿ ವ್ಯಾಪ್ತಿಯಲ್ಲಿ ಸುಪ್ರೀಂ ಕೋರ್ಟ್ ಪಟಾಕಿಗಳನ್ನು ನಿಷೇಧಿಸಿದ ಹಿನ್ನೆಲೆ, ಅಲ್ಲಂತೂ ಪಟಾಕಿಗಳ ಅಬ್ಬರ ಇಲ್ಲವಾಗಿದೆ.

ಸುರಕ್ಷತೆ ಮತ್ತು ಪರಿಸರದ ಬಗ್ಗೆ ಕಾಳಜಿಯಿಂದ ಸುಪ್ರೀಂ ಕೋರ್ಟ್ ಪಟಾಕಿಗಳನ್ನು ಬ್ಯಾನ್ ಮಾಡಿದ್ದು, ಇದು ಪಟಾಕಿ ಸಿಡಿಸಿ ಸಂಭ್ರಮಿಸುವ ಜನರಿಗೆ ಬೇಸರ ತರಿಸಿದೆ. ಇನ್ನು ದೆಹಲಿಯ ಸ್ಥಳೀಯ ಸಮೀಕ್ಷೆಯೊಂದರ ಪ್ರಕಾರ ದೆಹಲಿಯ ಶೇಕಡ 80 ರಷ್ಟು ಮಂದಿ ನಾವು ಪಟಾಕಿ ಸಿಡಿಸುವುದಿಲ್ಲವೆಂದು ಹೇಳಿದ್ದಾರೆ, ಮತ್ತು ಶೇ.20 ರರಷ್ಟು ಮಂದಿಗೆ ಪಟಾಕಿ ಸಿಡಿಸಲು ಇಷ್ಟವಿದ್ದು, ಕೋರ್ಟ್ ಆದೇಶ ಇರುವುದರಿಂದ ಪಟಾಕಿಗಳನ್ನು ಸಿಡಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಒಟ್ಟಾರೆ, ಸುಪ್ರೀಂ ಕೋರ್ಟ್ ಆದೇಶದಿಂದ ಮೊದಲೇ ಹದಗೆಟ್ಟಿದ್ದ ದೆಹಲಿಯ ವಾತಾವರಣ ಮತ್ತಷ್ಟು ಹಾಳಾಗುವುದು ತಪ್ಪಿದೆ. ದೀಪಾವಳಿ ಸಂದರ್ಭದಲ್ಲಿ ವಾಯುಮಾಲಿನ್ಯ, ಶಬ್ದಮಾಲಿನ್ಯದಿಂದ ವಿವಿಧ ರೀತಿಯ ಆರೋಗ್ಯದ ತೊಂದರೆ ಅನುಭವಿಸುತ್ತಿದ್ದವರಲ್ಲಿ ಒಂದಿಷ್ಟು ಸಂತೋಷವನ್ನೂ ತಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ