ಎಲ್ಲಿವೆ ಅಚ್ಚೇ ದಿನ್..? ಕೇಂದ್ರಕ್ಕೆ ಶಿವಸೇನೆ ಪ್ರಶ್ನೆ

Kannada News

19-10-2017

ಮುಂಬೈ: ದೀಪಾವಳಿಯ ಅಚ್ಚೇ ದಿನಗಳು ಎಲ್ಲಿವೆ ಎಂದು ಶಿವ ಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇದೇ ಶನಿವಾರ ದೀಪಾವಳಿ ಕೊನೆಗೊಳ್ಳಲಿದೆ ಆದರೆ, ದಿವಾಳಿಯಾದ ಆರ್ಥಿಕ ಪರಿಸ್ಥಿತಿ ಬಗ್ಗೆ ಏನು ಮಾಡುತ್ತೀರಿ..? ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೋಟು ಅಮಾನ್ಯೀಕರಣ, ಜಿಎಸ್ಟಿ ಜಾರಿಯಿಂದ ಆದ ತೊಂದರೆಗಳ ಬಗ್ಗೆ ಜನಸಾಮಾನ್ಯರು ಆಕ್ರೋಶಗೊಂಡಿದ್ದು, ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದಾರೆ. ಕೇಂದ್ರ ಸರ್ಕಾರ ಜನರಿಗೆ ನೀಡಿದ ಹುಸಿ ಭರವಸೆಗಳಿಗೆ ಜನರೇ ಉತ್ತರ ನೀಡುತ್ತಾರೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಬರೆಯಲಾಗಿದೆ.

ದೀಪಾವಳಿಯ ಲಕ್ಷ್ಮಿ ಪೂಜೆ ವೇಳೆ, ಮತ್ತೊಮ್ಮೆ ನಮ್ಮ ಶ್ರಮದಿಂದ ಸಂಪಾದಿಸಿದ ಹಣವನ್ನು, ನೋಟು ಅಮಾನ್ಯೀಕರಣದಂಥ ಕ್ರಮ ಜಾರಿಗೆ ಬಂದು, ದೋಚಿಕೊಂಡು ಹೋಗದಂತೆ ಪ್ರಾರ್ಥಿಸಿಕೊಳ್ಳಿರಿ ಎಂದು ಸಾಮ್ನಾ ಪತ್ರಿಕೆಯಲ್ಲಿ ಹೇಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಉದ್ಧವ್ ಠಾಕ್ರೆ ಸಾಮ್ನಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ