ಆಸ್ಪತ್ರೆಗೆ ದಾಖಲಾದ ಯಡಿಯೂರಪ್ಪ !

Kannada News

19-10-2017

ಬೆಂಗಳೂರು: ತೀವ್ರ ಅನಾರೋಗ್ಯದ ಹಿನ್ನೆಲೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸತತ ಪ್ರಯಾಣ ಹಾಗೂ ನಿರಂತರವಾಗಿ ಹಲವು ಸಭೆಗಳಲ್ಲಿ ಪಾಲ್ಗೂಂಡ ಯಡಿಯೂರಪ್ಪ ನವರಿಗೆ, ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು. ಇದರಿಂದ ಅವರಿಗೆ ಅತಿಯಾದ ಬಳಲಿಕೆ ಉಂಟಾಗಿದ್ದು, ಅವರನ್ನು ನಿನ್ನೆ ರಾತ್ರಿ ಬನ್ನೇರುಘಟ್ಟ ರಸ್ತೆಯ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಿಎಸ್ ವೈ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಾಳೆ ಮಧ್ಯಾಹ್ನದ ವೇಳೆಗೆ ಡಿಸ್ ಚಾರ್ಚ್ ಆಗುವ ಸಾಧ್ಯತೆ ಇದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ