ಬಿಗಿದಪ್ಪಿದ ಬಿಲ್ವಿದ್ಯೆ ಕೋಚ್‌ಗೆ ಬ್ಯಾನ್…

Kannada News

18-10-2017 599

ಭಾರತದ ಆರ್ಚೆರಿ ಅಂದರೆ, ಬಿಲ್ವಿದ್ಯಾ ಕ್ರೀಡೆಯ ಕೋಚ್‌ಗಳಲ್ಲಿ ಒಬ್ಬರಾದ ಸುನಿಲ್ ಕುಮಾರ್ ಅವರಿಗೆ ಆರ್ಚೆರಿ ಅಸೋಸಿಯೇಷನ್ ಆಫ್ ಇಂಡಿಯಾ ಜೀವಮಾನ ಪರ್ಯಂತ ನಿಷೇಧ ವಿಧಿಸಿದೆ.

ಇದೇ ಅಕ್ಟೋಬರ್ 2 ರಿಂದ 8 ರ ವರೆಗೆ ಅರ್ಜೆಂಟಿನಾ ದೇಶದಲ್ಲಿ ನಡೆದ ವಿಶ್ವ ಯುವ ಆರ್ಚೆರಿ ಚಾಂಪಿಯನ್ ಶಿಫ್ ವೇಳೆ ಸುನಿಲ್ ಕುಮಾರ್ ದುರ್ನಡತೆ ತೋರಿದ ಕಾರಣಕ್ಕಾಗಿ ಈ ನಿಷೇಧ ಹೇರಲಾಗಿದೆ. ಇನ್ನು ಮುಂದೆ, ಸುನಿಲ್ ಕುಮಾರ್ ಅವರು, ಬಿಲ್ವಿದ್ಯೆ ಕ್ರೀಡೆಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ.

ರೊಸಾರಿಯೋ ನಗರದಲ್ಲಿ ನಡೆದ ಆರ್ಚೆರಿ ಚಾಂಪಿಯನ್ ಶಿಫ್ ವೇಳೆ, ಸುನಿಲ್ ಕುಮಾರ್ ಅವರು, ಬ್ರಿಟನ್ ದೇಶದ ಮಹಿಳಾ ಆರ್ಚೆರಿ ತಂಡದ ಸದಸ್ಯೆಯೊಬ್ಬರನ್ನು ಬಲವಂತವಾಗಿ ಅಪ್ಪಿಕೊಂಡಿದ್ದರಂತೆ. ಈ ರೀತಿಯ ನಡವಳಿಕೆ ವಿರುದ್ಧ, ವಿಶ್ವ ಆರ್ಚೆರಿ ಸಂಸ್ಥೆ ಮತ್ತು ಬ್ರಿಟನ್ ತಂಡದ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು