ರಂಗಕರ್ಮಿ ಹೋರಾಟಕ್ಕೆ ದೇವೇಗೌಡರ ಸಾಥ್

Kannada News

18-10-2017

ಬೆಂಗಳೂರು: ಕೈ ಉತ್ಪನ್ನಗಳನ್ನು ಕರಮುಕ್ತಗೊಳಿಸುವಂತೆ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಸಾಥ್ ನೀಡಿದ್ದಾರೆ. ಬೆಂಗಳೂರಿನ ನಿಡುಮಾಮಿಡಿ ಮಠದಲ್ಲಿ ನಡೆಯುತ್ತಿರುವ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಅವರು, ರಂಗಕರ್ಮಿ ಪ್ರಸನ್ನ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಇನ್ನು ಈ ವೇಳೆ ಮಾತನಾಡಿದ ಅವರು, ಕೈ ಮಗ್ಗದಿಂದ ತಯಾರಿಸಿದ, ಗುಡಿ ಕೈಗಾರಿಕೆಗಳಲ್ಲಿ ತಯಾರಾದ ವಸ್ತುಗಳನ್ನು ಹಳ್ಳಿ ಜನ ಅಷ್ಟೆ ಅಲ್ಲ ನಗರ ಪ್ರದೇಶದ ಜನರೂ ಕೂಡಾ ಬಳಸುತ್ತಾರೆ. ಇಂಥ ಕೈ ಉತ್ಪನ್ನಗಳ ಮೇಲೆ ಜಿ.ಎಸ್.ಟಿ ತೆರಿಗೆ ವಿಧಿಸಿರುವುದರಿಂದ ಕೈಮಗ್ಗದ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದರು.

ಜಿ.ಎಸ್.ಟಿ ತಂದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಾರೀ ಹೆಮ್ಮೆ ಇದೆ. ಜಿ.ಎಸ್.ಟಿ ತೆರಿಗೆ ತಂದಿರುವುದರಿಂದ ಆಗುತ್ತಿರುವ ಅನಾಹುತಗಳನ್ನೂ ಕೇಂದ್ರ ಸರ್ಕಾರ ಯೋಚನೆ ಮಾಡಬೇಕು. ಇದರಲ್ಲಿ ಸಂಸದರಾದ ನಮ್ಮ ಕರ್ತವ್ಯ ಕೂಡಾ ಇದೆ, ಈ ಕುರಿತು ಪ್ರಧಾನಿಯವರನ್ನು ಭೇಟಿ ಮಾಡಿ ಈ ವಿಚಾರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ. ಈ ಹೋರಾಟದಲ್ಲಿ ನಾನೂ ಕೂಡಾ ಕೈ ಜೋಡಿಸುತ್ತೇನೆ. ಅಲ್ಲದೇ  ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ