ಬೆಂಗಳೂರಿನ ಟಾಟಾ ಇನ್ಸ್‌ಟಿಟ್ಯೂಟ್‌ಗೆ ಅಗ್ರ ಸ್ಥಾನ

Kannada News

18-10-2017

ನಮ್ಮ ಬೆಂಗಳೂರಿನ ಐಐಎಸ್‌ಸಿ ಅಂದರೆ, ಭಾರತೀಯ ವಿಜ್ಞಾನ ಮಂದಿರದ ಪ್ರತಿಷ್ಠೆಗೆ ಮತ್ತೊಂದು ಗರಿ ಮೂಡಿದೆ. ಟೈಮ್ಸ್ ಹೈಯರ್ ಎಜುಕೇಷನ್ ಸಂಸ್ಥೆ ಬಿಡುಗಡೆ ಮಾಡಿರುವ ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐಐಎಸ್‌ಸಿ ಭಾರತದ ಅತ್ಯುನ್ನತ ಶೈಕ್ಷಣಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್‌ ಆಫ್ ಸೈನ್ಸ್ ಗೆ ಈ ಗೌರವ ದೊರೆತಿದೆ. ಆದರೆ, ಇದೇ ಸಂಸ್ಥೆ, ವಿಶ್ವ ಮಟ್ಟದಲ್ಲಿ 89ನೇ ಸ್ಥಾನ ಪಡೆದಿರುವುದು ಅಂಥ ಸಂತೋಷದಾಯಕ ವಿಚಾರವೇನೂ ಆಗಿಲ್ಲ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ