'ನೆಮ್ಮದಿ ತಂದ ಕಾವೇರಿ ನದಿ'

Kannada News

18-10-2017

ಬೆಂಗಳೂರು: ಕಾವೇರಿ ನದಿ ರಾಜ್ಯದ ಜೀವನಾಡಿ. ಮಂಡ್ಯ,ಚಾಮರಾಜನಗರ ಸೇರಿದಂತೆ ಐದಾರು ಜಿಲ್ಲೆಯ ಜನರ ದಾಹ ತೀರಿಸುತ್ತಿದೆ. ಬೆಂಗಳೂರು, ಮೈಸೂರು, ಮಂಡ್ಯದ ಜನರ ಕುಡಿಯುವ ನೀರಿನ ಮೂಲವಾಗಿದೆ. ಮಳೆ ಅಭಾವದಿಂದ. ಕಳೆದ ನಾಲ್ಕಾರು ವರ್ಷದಿಂದ ಬೇಸಿಗೆಯಲ್ಲಿ ಬತ್ತಿ ಹೋಗುವ ಸ್ಥಿತಿಗೆ ತಲುಪಿದ್ದ ನದಿ, ಇಂದು ತುಂಬಿ ಹರಿಯುತ್ತಿರುವುದು ರಾಜ್ಯದ ಜನರಿಗೆ ನೆಮ್ಮದಿ ತಂದಿದೆ. ಇದು ಇದೇ ರೀತಿ ಮುಂದುವರಿಯಲಿ ಎಂದು ಕಾವೇರಿ ಮಾತೆಯಲ್ಲಿ ಪ್ರಾರ್ಥಿಸೋಣ ಎಂದು ಬಿಜೆಪಿ ಹಿರಿಯ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ನಿನ್ನೆ ತಲಕಾವೇರಿಯಲ್ಲಿ ನಡೆದ ತೀರ್ಥೋದ್ಭವ ಸಂದರ್ಭ ಸಂಗ್ರಹಿಸಿ ತರಲಾದ ಕಾವೇರಿ ನೀರನ್ನು, ಬೆಂಗಳೂರಿನ ರಣಧೀರ ಕಂಠೀರವ ವೃತ್ತದಲ್ಲಿರುವ ಕಾವೇರಿ ಮಾತೆಯ ವಿಗ್ರಹಕ್ಕೆ ಇಂದು ಅರ್ಪಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಕಾವೇರಿ ಮಾತೆಯ ಕೃಪೆ ರಾಜ್ಯದ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತಾ ಈ ಕಾವೇರಿ ನೀರನ್ನು ಮೂರ್ತಿಗೆ ಅರ್ಪಿಸಿದ್ದೇವೆ. ಕಳೆದ ಐದಾರು ವರ್ಷದಿಂದ ಎದುರಾಗಿದ್ದ ಬರದ ಸಮಸ್ಯೆಗೆ ಮಳೆ ಒಂದಿಷ್ಟು ಪರಿಹಾರ ಕಲ್ಪಿಸಿದೆ ಎಂದು ಹೇಳಿದರು. ಈ ವೇಳೆ ಶಾಸಕ ವಿಜಯ್ ಕುಮಾರ್, ಬಿಬಿಎಂಪಿ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.


ಸಂಬಂಧಿತ ಟ್ಯಾಗ್ಗಳು

KANNADA NEWS KARNATAKA ಆರ್.ಅಶೋಕ್ ತಲಕಾವೇರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ