'ಗುತ್ತಿಗೆ ಹೆಸರಲ್ಲಿ ಹಣ ಲೂಟಿ': ಎಚ್ಡಿಕೆ ವಾಗ್ದಾಳಿ

Kannada News

18-10-2017 212

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ, ಹಣ ಲೂಟಿ ಮಾಡಿ ಗುಜರಾತ್ ಉಪ ಚುನಾವಣೆಗೆ ಹಣ ಕಳುಹಿಸಿಸುತ್ತಿದೆ, ಗುತ್ತಿಗೆ ಹೆಸರಿನಲ್ಲೂ ಹಣ ಲೂಟಿ ಮಾಡಲಾಗುತ್ತಿದ್ದು, ಕರ್ನಾಟಕ ಇವರಿಗೆ ಹುಲ್ಲಗಾವಲು ಆಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಪ್ಯಾಕೇಜ್ ಕಾಮಗಾರಿ, ಟೆಂಡರ್ ಶೂರ್ ಸೇರಿ ನಾನಾ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಹಣ ಲೂಟಿ ಮಾಡಿದೆ. ಇದೆಲ್ಲಾ ಹೊರ ರಾಜ್ಯಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಹಣ ಕಳುಹಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅದಲ್ಲದೇ, ಕೆಲ ಯೋಜನೆಗಳು ಇನ್ನು ಜಾರಿಗೆ ಬಂದಿಲ್ಲ ಎಂದರು.

ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್ ನಾಯಕ ಬಗ್ಗೆ ಸಿಎಂ ಮಾತನಾಡಿ, ಹಿಂದಿನ ಮುಖ್ಯಮಂತ್ರಿ ಗಳು ಲೂಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಆ ಹಿಂದಿನ ಮುಖ್ಯಮಂತ್ರಿಗಳು ಯಾರೆಂದು ಹೇಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಸುಳ್ಳು ಹೇಳುವುದರಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿಗಿಂತ ಮುಂಚೂಣಿಗೆ ಬಂದಿದ್ದಾರೆ, ಸಿದ್ದರಾಮಯ್ಯನ ಹುಂಡಿಯಲ್ಲಿ ಹುಟ್ಟಿರುವ ಸಿದ್ದರಾಮಯ್ಯ ಅವರಿಗೆ ಸ್ವತಃ ಹರಿಶ್ಚಂದ್ರನೇ ಪಾಠ ಮಾಡಿದ್ದಾರೆ, ಅವರು ಮಾತನಾಡುವುದೆಲ್ಲಾ, ಸರಿ ಎಂದು ವ್ಯಂಗ್ಯವಾಡಿದರು.

ಪ್ಯಾಕೇಜ್‌ನಲ್ಲಿ ಹಣ ಲೂಟಿ ಮಾಡಲಾಗುತ್ತಿದೆ. ಈ ಪ್ಯಾಕೆಜ್ ಗಳ ಎಂಜಿನಿಯರ್ ಗೆ ನೇಣು ಹಾಕಬೇಕು ಎಂದು ಆಕ್ರೋಶದಿಂದ ನುಡಿದಿದ್ದಾರೆ. ಇನ್ನು ಬೆಂಗಳೂರಿನ ಗುತ್ತಿಗೆದಾರರಲ್ಲಿ, ಬಹಳಷ್ಟು ಜನ ಆಂಧ್ರ ಮೂಲದವರು ಎಂದು ದೂರಿದರು.

ಆರೋಗ್ಯ ಸಂಬಂಧ ವಿಶ್ರಾಂತಿಯಲ್ಲಿ ಇದ್ದರೂ, ಸಮಾಜದ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಆಸ್ಪತ್ರೆಗಳಲ್ಲಿ ಬಳಿಸಿದ ಪದ ವಿವಾದವಾಗಿದೆ. ನಾನು ಅಂದು ಆಸ್ಪತ್ರೆಯಲ್ಲಿ ಆರೋಗ್ಯ ಚೇತರಿಕೆ ಬಗ್ಗೆ ನಾನು ಹೇಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ತೋರಿಸುವ ಔದಾರ್ಯ ಜನರಿಗೂ ತೋರಿಸಿ ಎಂದಿದ್ದೆ ಅಷ್ಟೇ ಎಂದು ಹೇಳಿದರು.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ