ಪೊಲೀಸರ ಬಲೆಗೆ ಅಂತರಾಜ್ಯ ಕಳ್ಳರು

Kannada News

18-10-2017

ರಾಯಚೂರು: ಗ್ರಾಮೀಣ ಪ್ರದೇಶದಲ್ಲಿ ಮನೆಕಳ್ಳತನ ಮಾಡುತ್ತಿದ್ದ, ಇಬ್ಬರು ಅಂತರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯ ತಾಳಿಕುಂಟ ಗ್ರಾಮದ ದೊಡ್ಡ ನರಸಿಂಹಲು, ಸಣ್ಣ ನರಸಿಂಹಲು ಬಂಧಿತರು. ಬಂಧಿತರಿಂದ ಚಿನ್ನಾಭರಣ, ಬೈಕ್, ಮೊಬೈಲ್  ವಶಪಡಿಸಿಕೊಳ್ಳಲಾಗಿದೆ. ಯಾಪಲದಿನ್ನಿ, ಸರ್ಜಾಪುರ, ನಾಗನದೊಡ್ಡಿ, ರಾಳ್ಳದೊಡ್ಡಿಯಲ್ಲಿ ಕಳೆದೊಂದು ತಿಂಗಳಿಂದ ಮನೆಗಳ ಬೀಗ ಮುರಿದು ಇವರು ಕಳ್ಳತನ ಮಾಡುತ್ತಿದ್ದರು.

ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ ರೋಪಿಗಳ ಶೋಧಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಕೊಪ್ಪಳ ಎಸ್‍ಪಿ ಅನೂಪ್ ಶೆಟ್ಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ್ ನೇತೃತ್ವದಲ್ಲಿ, ಪೊಲೀಸ್ ಉಪಾಧೀಕ್ಷಕ ಜಿ.ಹರೀಶ, ಸಿಪಿಐ ಹನುಮರೆಡ್ಡೆಪ್ಪ, ಪಿಎಸ್‍ಐ ಮಲ್ಲಿಕಾರ್ಜುನ ಇಕ್ಕಳಕಿ, ಎಎಸೈ ಜಿಲಾನಿ ಪಾಷಾ ಹಾಗೂ ವಿವಿಧ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ