ಬಾಲಕನ ಮುಖಕ್ಕೆ ಸಿಡಿದ ಪಟಾಕಿ !

Kannada News

18-10-2017

ಬಳ್ಳಾರಿ: ಪಟಾಕಿ ಸಿಡಿದು ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಳ್ಳಾರಿಯಲ್ಲಿಂದು ನಡೆದಿದೆ. ನರಸಿಂಹ(11) ಗಾಯಗೊಂಡ ಬಾಲಕ. ಬಳ್ಳಾರಿ ನಗರ-ಬೆಂಗಳೂರು ಮುಖ್ಯರಸ್ತೆಯ ನಿವಾಸಿ ನರಸಿಂಹ, ದೀಪಾವಳಿ ಪ್ರಯುಕ್ತ ಇಂದು ಬೆಳಗ್ಗೆಯಿಂದಲೇ ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದನು. ಇದೇ ವೇಳೆ ಪಟಾಕಿಯೊಂದು ಸಿಡಿದು ನರಸಿಂಹ ಮುಖಕ್ಕೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ವಿಮ್ಸ ಆಸ್ಪತ್ರೆಗೆ ಬಾಲಕನನ್ನು ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಆಸ್ಪತ್ರೆಗೆ ಬ್ರೂಸ್‍ ಪೇಟೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ