ಆಚಾರವಿಲ್ಲದ ನಾಲಗೆ…!

Kannada News

18-10-2017 350

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಾಚ್ಯ ಶಬ್ದ ಪ್ರಯೋಗ ಮಾಡಿದ್ದ ಸಚಿವ ರೋಷನ್ ಬೇಗ್ ವಿರುದ್ಧ, ಬಿಜೆಪಿ ಎಂಎಲ್‌ಸಿ ಭಾನುಪ್ರಕಾಶ್, ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಆಕ್ರೋಶಭರಿತ ಭಾಷಣ ಮಾಡಿದ ಭಾನುಪ್ರಕಾಶ್, ಸಚಿವ ರೋಷನ್ ಬೇಗ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಭಾನುಪ್ರಕಾಶ್ ಅವರು ರೋಷನ್ ಬೇಗ್ ಬಗ್ಗೆ ಬಳಸಿದ ಮಾತುಗಳು, ರೋಷನ್ ಬೇಗ್ ಅವರು ಮೋದಿಯವರ ವಿರುದ್ಧ ಬಳಸಿದ ಮಾತುಗಳಿಗಿಂತ ಕಡಿಮೆಯೇನೂ ಇರಲಿಲ್ಲ. ಹೀಗಾಗಿ, ಇಲ್ಲಿ ಯಾರೂ ಕೂಡ ಉತ್ತಮರಲ್ಲ ಅನ್ನುವುದಷ್ಟೇ ಸತ್ಯ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ