ಕಾಗೋಡು ವಿರುದ್ಧ ಬ್ರಾಹ್ಮಣರ ಆಕ್ರೋಶ

Kannada News

18-10-2017

ಬೀದರ್: ಬ್ರಾಹ್ಮಣ ಸಮಾಜಕ್ಕೆ ನೋವುಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ತಕ್ಷಣವೇ ಸಿದ್ದರಾಮಯ್ಯ ಸಂಪುಟದಿಂದ ಕೈ ಬಿಡಬೇಕೆಂದು  ಬ್ರಾಹ್ಮಣ ಸಮಾಜದ ಸಂಘಟನೆಗಳು ಆಗ್ರಹಿಸಿವೆ.

ಯಾವುದೇ ವಿವಾದಾತ್ಮಕ ವಿಷಯಕ್ಕೆ ಹೋಗದ ಬ್ರಾಹ್ಮಣ ಸಮಾಜದ ಬಗ್ಗೆ, ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಹಿರಿಯ ಸಾಹಿತಿ ಚಂಪಾ ಅವರು ವಿನಾಕಾರಣ ನೀಡಿರುವ ಹೇಳಿಕೆ, ತೀರಾ ಖಂಡನೀಯವಾಗಿದೆ. ಒಬ್ಬ ಹಿರಿಯ ಸಚಿವರಾದವರು, ನಮ್ಮ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಮತ್ತು ಬ್ರಾಹ್ಮಣರೂ ಮಾಂಸ ಭಕ್ಷಕರು ಎಂದು ಹೇಳಿದ್ದು ಸರಿ ಅಲ್ಲ ಎಂದು ಬ್ರಾಹ್ಮಣ ಸಮುದಾಯ ಖಂಡಿಸಿದೆ.

ಸಿಎಂ ಸಿದ್ದರಾಮಯ್ಯನವರು ಕಾಗೋಡು ತಿಮ್ಮಪ್ಪ ಅವರನ್ನು ಸಂಪುಟದಿಂದ ಕೈಬಿಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಬ್ರಾಹ್ಮಣ ಸಂಘಟನೆಗಳ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ