ರಹಸ್ಯ ಜೇಬಲ್ಲಿತ್ತು ಚಿನ್ನ: 4 ಮಂದಿ ಅರೆಸ್ಟ್

Kannada News

18-10-2017

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) 3 ಪ್ರತ್ಯೇಕ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿರುವ ಆರ್ಥಿಕ ಗುಪ್ತಚರ ಇಲಾಖೆ (ಡಿಆರ್​ಐ) ಅಧಿಕಾರಿಗಳು 2.33 ಕೋಟಿ ರೂ. ಮೌಲ್ಯದ 7.5 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.

ಎಮಿರೇಟ್ಸ್ ವಿಮಾನದಲ್ಲಿ ದುಬೈನಿಂದ ಕೆಐಎಗೆ ಬಂದ ಜೋರ್ಡಾನ್ ದೇಶದ ಅಬ್ದುಲ್ ರೆಹಮಾನ್ (38) ಹಾಗೂ ಯೂಸಫ್ ಹೆರ್ಜಲ್ಲಾ (39) ಎಂಬುವರನ್ನು ಬಂಧಿಸಿ ಒಟ್ಟು 6.5 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಅಬ್ದುಲ್ ರೆಹಮಾನ್ ಪ್ಯಾಂಟಿನ 3 ರಹಸ್ಯ ಜೇಬುಗಳಲ್ಲಿ 3.25 ಕೆಜಿ ಚಿನ್ನ ಪತ್ತೆಯಾಗಿದೆ. ಪ್ರಯಾಣಿಸಿದ ಟಿಕೆಟ್ ಪರಿಶೀಲನೆ ನಡೆಸಿದಾಗ ಆತನ ಜೊತೆಯಲ್ಲಿ ಯುಸೂಫ್ ಎಂಬಾತನೂ ಬಂದಿರುವುದು ಬೆಳಕಿಗೆ ಬಂದಿದೆ. ಆದರೆ, ಆತ ವಿಮಾನದಿಂದ ಇಳಿದು ವಲಸೆ ವಿಭಾಗದಲ್ಲಿ ದಾಖಲೆಗಳ ಪರಿಶೀಲನೆಗೆ ಒಳಪಟ್ಟು ಹೊರಗೆ ಹೋದಾಗ ನಿರ್ಗಮನ ದ್ವಾರದ ಬಳಿ ಚಿನ್ನ ಪಡೆಯುವ ವ್ಯಕ್ತಿ ಬಂದಿರಲಿಲ್ಲ. ಆದರೆ, ಯಾರೊಬ್ಬರು ಬಾರದ ಕಾರಣ ಯುಸೂಫ್ ನಿಲ್ದಾಣದಿಂದ ಹೊರಗೆ ಹೋಗಿದ್ದ, ಅನುಮಾನಗೊಂಡ ಅಧಿಕಾರಿಗಳು ಜಾಡು ಹಿಡಿದಾಗ ಆತ ಕ್ರೌನ್ ಹೋಟೆಲ್​ನಲ್ಲಿ ಕೊಠಡಿ ಪಡೆದಿರುವುದು ಪತ್ತೆಯಾಯಿತು. ಕೂಡಲೇ ಡಿಆರ್​ಐ ತಂಡ ಹೊಟೇಲ್ ಮೇಲೆ ದಾಳಿ ನಡೆಸಿದಾಗ ಯೂಸಫ್ ಸಿಕ್ಕಿದ್ದು, ಆತನ ಪ್ಯಾಂಟಿನ ರಹಸ್ಯ ಜೇಬಿನಲ್ಲಿ 3.25 ಕೆಜಿ ಚಿನ್ನದ ಬಿಸ್ಕತ್ ದೊರೆತಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ