‘ದಲಿತ’-‘ಹರಿಜನ’ ಪದ ನಿಷೇಧ..?

Kannada News

18-10-2017 547

ರಾಜ್ಯ ಸರ್ಕಾರದ ಯಾವುದೇ ಪ್ರಕಟಣೆ, ಆದೇಶ ಮತ್ತು ಸುತ್ತೋಲೆಗಳಲ್ಲಿ ದಲಿತರು ಮತ್ತು ಹರಿಜನರು ಎಂಬ ಪದಗಳನ್ನು ಬಳಕೆ ಮಾಡಬಾರದು ಎಂದು ಕೇರಳ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸುತ್ತೋಲೆ ಹೊರಡಿಸಿದೆ. ರಾಜ್ಯದ ಪರಿಶಿಷ್ಟ ಜಾತಿ ಮತ್ತು ವರ್ಗ ಆಯೋಗದ ಶಿಫಾರಸ್ಸಿನ ಅನುಸಾರ ಪ್ರಕಾರ ಈ ಸುತ್ತೋಲೆ ಹೊರಡಿಸಲಾಗಿದೆ. ದಲಿತರು ಮತ್ತು ಹರಿಜನರು ಎಂಬ ಪದಗಳ ಬಳಕೆ ಬದಲಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವವರು ಎಂದೇ ಬಳಸಬೇಕೆಂದು ಸೂಚಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವವರ ಬಗ್ಗೆ ಸಮಾಜದ ಹಲವು ಹಂತಗಳಲ್ಲಿ ಇನ್ನೂ ಕೂಡ ಕಂಡುಬರುತ್ತಿರುವ ಸಾಮಾಜಿಕ ತಾರತಮ್ಯವನ್ನು ತೊಡೆದುಹಾಕುವ ಸಲುವಾಗಿ ಈ ರೀತಿ ಶಿಫಾರಸು ಮಾಡಲಾಗಿದೆಯೆಂದು ಹೇಳಲಾಗಿದೆ.

ಆದರೆ, ‘ದಲಿತರು’ ಮತ್ತು ‘ಹರಿಜನರು’ ಎಂಬ ಪದಗಳ ಬಳಕೆಯನ್ನು ಕೈಬಿಡುವುದು ನಮಗೆ ಒಪ್ಪಿಗೆಯಿಲ್ಲ ಎಂದು ದಲಿತ ಕಾರ್ಯಕರ್ತರು ಪ್ರತಿಕ್ರಿಯೆ ನೀಡಿದ್ದಾರೆ. ದಲಿತ ಅನ್ನುವ ಪದ, ನಮಗೆ ರಾಜಕೀಯ ಮತ್ತು ಸಾಮಾಜಿಕ ಗುರುತನ್ನು ನೀಡುತ್ತದೆ, ಇಂಥ ವಿಚಾರಗಳಲ್ಲಿ ರಾಜ್ಯ ಸರ್ಕಾರ ತಲೆ ಹಾಕಬಾರದು ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿರುವ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ, ಸಂಬಂಧಿಸಿದ ಎಲ್ಲರ ಜೊತೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ