ನಂಬರ್ ಪ್ಲೇಟ್‍: ಜೇಬಿಗೆ ಕತ್ತರಿ..?

Kannada News

18-10-2017

ವಾಹನಗಳ ನಂಬರ್ ಪ್ಲೇಟ್ ಬದಲಾಯಿಸುವ ಕುರಿತು ಸರ್ಕಾರ ಹೊಸಾ ನಿಮಯ ತರಲು ಹೊರಟಿದ್ದು, ಮಾಲೀಕರ ಜೇಬಿಗೆ ಕತ್ತರಿ ಬೀಳುವುದು ಬಹುತೇಕ ಖಚಿತವಾಗಿದೆ.

ರಾಷ್ಟ್ರೀಯ ಲಾಂಛನವನ್ನುಳ್ಳ ನಂಬರ್ ಪ್ಲೇಟ್‍ಗಳನ್ನು ಅಳವಡಿಸಬೇಕಾಗಿದ್ದು, ದ್ವಿಚಕ್ರವಾಹನಗಳ ಪ್ಲೇಟ್‍ಗೆ 600ರೂ, ಕಾರುಗಳಿಗೆ 1200ರೂ, ಹಾಗು ದೊಡ್ಡ ವಾಹನಗಳಿಗೆ 1800ರೂಗಳನ್ನು ನಿಗಧಿ ಮಾಡುವ ಪ್ರಸ್ತಾಪನ್ನು ಹೊಂದಿದೆ. ಈ ಕುರಿತಂತೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮುಂದುವರಿದಿದ್ದು, ಇದರ ಹಿಂಗೆ ಕಮೀಷನ್ ವ್ಯವಹಾರವಿದ್ದು ಚುನಾವಣೆಗಾಗಿ ದೊಡ್ಡ ಮೊತ್ತ ಸಂಗ್ರಹಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು, ಮಾಜಿ ಸಿ.ಎಂ.ಕುಮಾರಸ್ವಾಮಿ ಗುಡುಗಿದ್ದಾರೆ.

ಅವರೊಬ್ಬರೇ ಪ್ರಾಮಾಣಿಕರು, ಇತರರೆಲ್ಲ ಭ್ರಷ್ಟರು ಎಂದು ಭ್ರಮಿಸಿರುವ ಸಿದ್ದು ಮನೆ ಮುಂದೆಯೇ ಸತ್ಯಹರಿಶ್ಚಂದ್ರ ಹುಟ್ಟಿದ್ದಾ ಎಂದು ಕುಟುಕಿ, ಜೆಡಿಎಸ್ ಅನ್ನು ಯಾರೂ ನಾಶಗೊಳಿಸಲಾಗಲ್ಲ. ನನ್ನ ಮತ್ತು ರೇವಣ್ಣ ನಡುವೆ ಬಿರುಕು ಯಾವ ಕಾರಣಕ್ಕೂ ಬರಲ್ಲ ಎಂದ ಅವರು, ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳೆದುರು ಹೊಂದಾಣಿಕೆಗೆ ಹೋಗಲ್ಲ ಎಂದರು.

ಹಣ ಮತ್ತು ಅಧಿಕಾರ ಮದದಿಂದ ಮೆರೆಯುತ್ತಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಸೇರುವ ಮುನ್ನ ಬಿಜೆಪಿಗೆ ಹೋಗುವುದಕ್ಕೆ ಸಿದ್ದವಾಗಿದ್ದರು, ಆದರೆ ಕೊನೇ ಘಳಿಗೆಯಲ್ಲಿ ಅದನ್ನು ಬದಲಿಸಿಕೊಂಡು ಕಾಂಗ್ರೆಸ್ ಗೆ ಹೋದರು, ಅಧಿಕಾರ ಸಿಗುವುದಾದರೆ ಸಿದ್ದರಾಮಯ್ಯ ಯಾವ ಪಕ್ಷಕ್ಕಾದರೂ ಹೋಗುತ್ತಾರೆ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದ್ದಾರೆ.

ವರದಿ: ಜಿ.ಆರ್. ಸತ್ಯಲಿಂಗರಾಜುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ