ನಕಲಿ ದಾಖಲೆ: ಬ್ಯಾಂಕ್ ಗೆ 3 ಕೋಟಿ ವಂಚನೆ

Kannada News

17-10-2017

ಬೆಂಗಳೂರು: ನಕಲಿ ದಾಖಲೆ ಸೃಷ್ಠಿಸಿ ಆಂಧ್ರ ಪ್ರದೇಶದ ಬ್ಯಾಂಕ್‍ ಒಂದರಲ್ಲಿ ಕೋಟ್ಯಾಂತರ ರೂ. ವಂಚನೆ ನಡೆಸಿ, ಪರಾರಿಯಾಗಿರುವ ಸುಧಾಮನಗರದ ರಾಘವೇಂದ್ರ ಎನ್ನುವ ಆರೋಪಿಗಾಗಿ ಆಂಧ್ರ ಪ್ರದೇಶ ಸಿಐಡಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಸುಧಾಮನಗರದ ಲಾಲ್‍ಬಾಗ್ ರಸ್ತೆಯಲ್ಲಿ ವಾಸಿಸುವ ವಿಳಾಸ ನೀಡಿದ್ದ, ರಾಘವೇಂದ್ರ ಅಲಿಯಾಸ್ ರಾಘು ಅಲಿಯಾಸ್ ರವಿಶಂಕರ್(36) ಎಂಬಾತ ಪೂರ್ವ ಗೋಧಾವರಿಯ ಕಾಕಿನಾಡ ಜಿಲ್ಲೆಯ ಬ್ಯಾಂಕ್‍ವೊಂದಕ್ಕೆ ನಕಲಿ ದಾಖಲಾತಿ ನೀಡಿ 3 ಕೋಟಿಗಳ ವಂಚನೆ ನಡೆಸಿ ಪರಾರಿಯಾಗಿದ್ದಾನೆ.

ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಅಲ್ಲಿನ ಸಿಐಡಿ ಪೊಲೀಸರಿಗೆ ವಹಿಸಲಾಗಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆ ದುರುಪಯೋಗದಡಿ ಪ್ರಕರಣ ದಾಖಲಿಸಲಾಗಿತ್ತು. ಕಾಕಿನಾಡದ ಹೆಚ್ಚುವರಿ ಜೆಎಂಸಿ ನ್ಯಾಯಾಲಯದ ಆದೇಶದ ಮೇರೆಗೆ ನಗರಕ್ಕೆ ಆಗಮಿಸಿದ್ದ ಆಂಧ್ರಪ್ರದೇಶ ಸಿಐಡಿ ಪೊಲೀಸರು ವಿಲ್ಸನ್‍ ಗಾರ್ಡನ್ ಪೊಲೀಸರ ನೆರವಿನೊಂದಿಗೆ ಆರೋಪಿ ವಿಳಾಸ ನೀಡಿದ್ದ ಸ್ಥಳವನ್ನು ಪರಿಶೀಲಿಸಿಕೊಂಡು ಹೋಗಿದ್ದಾರೆ. ಈ ವಿಳಾಸದಲ್ಲಿ ಆರೋಪಿ ನೆಲೆಸಿದ್ದಾಗಲಿ ಆತನ ಮಾಹಿತಿಯಾಗಲಿ ತಿಳಿದುಬಂದಿಲ್ಲ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ