ಮಹಿಳೆಯರಿಗೆ ದೆಹಲಿ ಎಷ್ಟು ಸೇಫ್..?

Kannada News

17-10-2017 203

ದೆಹಲಿ ಮಹಾನಗರ, ಮಹಿಳೆಯರ ಪಾಲಿಗಂತೂ ಆಗಿಬರುವ ನಗರ ಅಲ್ಲವೇ ಅಲ್ಲವಂತೆ. ದೆಹಲಿ, ಮಹಿಳೆಯರಿಗೆ ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಬಗ್ಗೆ, ಅಂತಾರಾಷ್ಟ್ರೀಯ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ಈ ಮಾತನ್ನು ಹೇಳುತ್ತಿದೆ. ಜಗತ್ತಿನ ಕೆಲವು ಮಹಾನಗರಗಳಲ್ಲಿ ವಾಸವಾಗಿರುವ ವಿವಿಧ ಕ್ಷೇತ್ರದ ತಜ್ಞರೊಂದಿಗೆ ಸಂದರ್ಶನ ನಡೆಸಿದ ಬಳಿಕ, ಆ ನಗರಗಳು ಮಹಿಳೆಯರ ಪಾಲಿಗೆ ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಬಗ್ಗೆ ನಿರ್ಧರಿಸಲಾಗಿದೆ.

ಜಗತ್ತಿನ ಇತರೆ ಮಹಾನಗರಗಳಿಗಿಂತಲೂ ದೆಹಲಿಯಲ್ಲಿ ಬೀದಿ ಕಾಮಣ್ಣರ ಚೇಷ್ಟೆ ಮತ್ತು ಲೈಂಗಿಕ ಕಿರುಕುಳಗಳು ಹೆಚ್ಚು ಎಂದು ಈ ಸಮೀಕ್ಷೆ ಹೇಳುತ್ತದೆ. ಇಡೀ ದೇಶದಲ್ಲಿ ಪ್ರತಿಭಟನೆಗಳ ಕಿಡಿ ಹಚ್ಚಿದ ‘ನಿರ್ಭಯ’ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರವೂ ದೆಹಲಿಯಲ್ಲಿನ ಪರಿಸ್ಥಿತಿ ಬದಲಾಗದಿರುವುದು ದುರದೃಷ್ಟಕರ ಸಂಗತಿ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ