ಆಟೋ ಗುದ್ದಿ ಮಹಿಳೆ ಸಾವು

Kannada News

17-10-2017

ಬೆಂಗಳೂರು: ನಗರದ ಹಲಸೂರಿನ ಟ್ರಿನಿಟಿ ಲಾಡ್ಜ್ ಬಳಿ ನಿನ್ನೆ ರಾತ್ರಿ ವೇಗವಾಗಿ ಬಂದ ಆಟೋ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ದುರ್ಘಟನೆ ನಡೆದಿದೆ.

ಜೋಗುಪಾಳ್ಯದ ರೆಬೆಕಾ ದೇವದಾಸ್ (53)ಎಂದು ಮೃತಪಟ್ಟ ಮಹಿಳೆಯನ್ನು ಗುರುತಿಸಲಾಗಿದೆ. ಟ್ರಿನಿಟಿ ಚರ್ಚ್‍ನಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ರೆಬೆಕಾ ಅವರು, ರಾತ್ರಿ 9.30ರ ವೇಳೆ ಚರ್ಚ್‍ಗೆ ಹೋಗಲು ಟ್ರಿನಿಟಿ ಲಾಡ್ಜ್ ಬಳಿ ರಸ್ತೆ ದಾಟುತ್ತಿದ್ದರು. ರಸ್ತೆ ವಿಭಜಕವನ್ನು ಹತ್ತಿ ಇಳಿದ ತಕ್ಷಣ ವೇಗವಾಗಿ ಬಂದ ಆಟೊ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಮೃತಪಟ್ಟಿದ್ದು, ಪ್ರಕರಣ ದಾಖಲಿಸಿರುವ ಹಲಸೂರು ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ