ಪ್ರಾಣಕ್ಕೆ ಕುತ್ತು ತಂದ ಕಾರ್ಖಾನೆ !

Kannada News

17-10-2017 249

ಬೆಂಗಳೂರು: ಹೊಸದಾಗಿ ಪ್ರಾರಂಭಿಸಿದ್ದ ಕಾರ್ಖಾನೆಯಲ್ಲಿ ಉಂಟಾದ ನಷ್ಟದಿಂದ ಬೇಸತ್ತ ಮಾಲೀಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ, ರಾಜಗೋಪಾಲ ನಗರದಲ್ಲಿ ನಡೆದಿದೆ. ರಾಜಗೋಪಾಲ ನಗರದ ಕಸ್ತೂರಿ ಬಡಾವಣೆಯ ಅರುಣ್ ಕುಮಾರ್ (33)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ. ಹೊಸದಾಗಿ ಲೇತ್ ಮಿಷನ್‍ ನನ್ನು ಕೊಂಡು ಕಾರ್ಖಾನೆ ಆರಂಭಿಸಿದ್ದ ಅರುಣ್ ಕುಮಾರ್ ಅವರಿವರ ಬಳಿಸಾಲ ಮಾಡಿಕೊಂಡಿದ್ದರು.

ಕಾರ್ಖಾನೆಯಲ್ಲಿ ಸರಿಯಾಗಿ ವ್ಯವಹಾರ ನಡೆಯದೆ ಅರುಣ್ ಕುಮಾರ್ ಅವರಿಗೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಇದಲ್ಲದೆ ಮದುವೆಯಾಗಿ ಬಹಳ ದಿನ ಕಳೆದರೂ ಮಕ್ಕಳಾಗಿರಲಿಲ್ಲ. ಇದರಿಂದ ನೊಂದ ಅವರು ಪತ್ನಿಯನ್ನು ತವರಿಗೆ ಕಳುಹಿಸಿ ನೇಣಿಗೆ ಶರಣಾಗಿದ್ದಾರೆ. ರಾಜಗೋಪಾಲ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ