ರೌಡಿ ಪತಿಯಿಂದ ಪತ್ನಿಗೆ ಚಾಕು ಇರಿತ !

Kannada News

17-10-2017

ಬೆಂಗಳೂರು: ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಮಂಗಳವಾರ ಬೆಳಿಗ್ಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜಗಳ ತೆಗೆದ ರೌಡಿಯೊಬ್ಬ, ನಡು ರಸ್ತೆಗೆ ಪತ್ನಿಯನ್ನು ಎಳೆದು ತಂದು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಪತಿಯ ಚಾಕು ಇರಿತದಿಂದ ಕುತ್ತಿಗೆ ಹಾಗೂ ಹೊಟ್ಟೆಗೆ ಗಭೀರವಾಗಿ ಗಾಯಗೊಂಡಿರುವ, ಚಿಂತಾಮಣಿಯ ಅಂಬೇಡ್ಕರ್ ಕಾಲೋನಿಯ ನಾಗರತ್ನಮ್ಮ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೊಲೆಯತ್ನ,ಬೆದರಿಕೆ ಸುಲಿಗೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗುಡ್ಡಿ ಲಕ್ಷಣ ಚಿಂತಾಮಣಿ ನಗರ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದನು. ನಾಗರತ್ನಮ್ಮ ಗುಡ್ಡಿ ಲಕ್ಷಣನ ಎರಡನೇ ಹೆಂಡತಿಯಾಗಿದ್ದು, ಪೆಟ್ಟಿಗೆ ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು.

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ನಾಗರತ್ನಮ್ಮನ ಜೊತೆ ಜಗಳದಿಂದ ಗುಡ್ಡಿ ಲಕ್ಷಣ ಆಕ್ರೋಶಗೊಂಡು, ರಸ್ತೆಗೆ ಆಕೆಯನ್ನು ಎಳೆದು ತಂದು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ, ತಕ್ಷಣ ರಕ್ಷಣೆಗೆ ಧಾವಿಸಿದ ಸ್ಥಳೀಯರು ನಾಗರತ್ನಮ್ಮ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪರಾರಿಯಾಗಿರುವ ರೌಡಿ ಗುಡ್ಡಿ ಲಕ್ಷಣನಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ