‘ಎಲ್ಲರಂತಲ್ಲ ನಾನು’

Kannada News

17-10-2017

ಬೆಂಗಳೂರು: ಎಲ್ಲ ಮೇಯರ್‌ ಅವರಂತೆ ನಾನಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ನಗರದ ಕಾಮಗಾರಿಗಳು ಹಾಗೂ ಅಭಿವೃದ್ಧಿಯ ಬಗ್ಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಆ ಆದೇಶವನ್ನು ಪಾಲನೆ ಮಾಡಬೇಕಾದರೆ ನೀವು ನನ್ನೊಂದಿಗೆ ಸಹಕರಿಸಬೇಕು, ಇಲ್ಲವಾದಲ್ಲಿ ಶಿಸ್ತುಕ್ರಮ ಜರುಗಿಸಲೇಬೇಕಾಗುತ್ತದೆ ಎಂದು ಮೇಯರ್ ಸಂಪತ್ ರಾಜ್ ಅವರು, ಹೆಬ್ಬಾಳದ ವಿಧಾನಸಭಾ ಕ್ಷೇತ್ರದ 8 ವಾರ್ಡ್‌ಗಳ ಎಂಜಿನಿಯರ್‌ ಗಳು ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೃಹತ್ ನೀರುಗಾಲುವೆ ಕಾಮಗಾರಿ ಮತ್ತು ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ತಪಾಸಣೆ ನಡೆಸಿದ ಮೇಯರ್, ಇನ್ನೊಂದು ವಾರದಲ್ಲಿ ಈ ಕ್ಷೇತ್ರದಲ್ಲಿರುವ ರಸ್ತೆಗುಂಡಿಗಳನ್ನು ಮುಚ್ಚಲೇಬೇಕು ಎಂದು ಆದೇಶಿಸಿದರು.

ಇಂದು ಕ್ಷೇತ್ರದ ವಾರ್ಡ್‌ಗಳ ಬಹುತೇಕ ಪ್ರದೇಶಗಳಲ್ಲಿ ನಡೆಸಿದ ಕಾಮಗಾರಿಗಳ ತಪಾಸಣೆಯ ಖರ್ಚಿನ ಪ್ರತಿ ಅಂಶವನ್ನು ಡೈರಿಯಲ್ಲಿ ಗುರುತು ಮಾಡಿಕೊಳ್ಳಬೇಕು. ಮನೆ ಮತ್ತು ಕಛೇರಿಯಿಂದ ಹೊರಡುವ ವೇಳೆ ಈ ಡೈರಿಯನ್ನು ತಪ್ಪದೆ ತಮ್ಮ ಬಳಿ ಇಟ್ಟುಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ತಪಾಸಣೆ ಬಂದ ವೇಳೆ ಡೈರಿಯನ್ನು ಪರಿಶೀಲಿಸುತ್ತೇನೆ ಎಂದರು.

ಕಾಮಗಾರಿಗಳ ಪ್ರಗತಿ ಅನುದಾನ ಮತ್ತಿತರ ಅಂಶಗಳ ಬಗ್ಗೆ ಡೈರಿಯಲ್ಲಿ ಬರೆದಿಟ್ಟುಕೊಳ್ಳಬೇಕು. ಪ್ರತಿದಿನದ ಕಾಮಗಾರಿಗಳ ಪ್ರಗತಿಯ ಬಗ್ಗೆಯೂ ವಿವರ ಇಡಬೇಕು. ಒಂದು ವೇಳೆ ಅಂತಹ ವಿವರಗಳನ್ನು ಬರೆದಿಟ್ಟುಕೊಳ್ಳದೇ ಇರುವ ಅಧಿಕಾರಿಗಳ ವಿರುದ್ಧ ನಾನು ಸುಮ್ಮನಿರುವುದಿಲ್ಲ ಎಂದು ಗುಡುಗಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ