ಕಳ್ಳರ ಪಾಲಾದ ದೇವಿಯ ಆಭರಣಗಳು !

Kannada News

17-10-2017

ಮೈಸೂರು: ಪ್ರಸಿದ್ಧ ಆದಿಶಕ್ತಿ ದೇವಿಯ ಗುಡಿಗೆ ನುಗ್ಗಿದ ಚೋರರು ದೇವಿ ಮೇಲಿದ್ದ ಆಭರಣಗಳನ್ನು ಕದ್ದೊಯ್ದಿದ್ದಾರೆ. ನಗರದ ಹೊರವಲಯದ ಮೈದನಹಳ್ಳಿಯಲ್ಲಿರುವ ಆದಿಶಕ್ತಿ ದೇವಾಲಯದಲ್ಲಿ ನಿನ್ನೆ ಸಂಜೆ ಎಂದಿನಂತೆ ಪೂಜೆ ನೆರವೇರಿಸಿ, ರಾತ್ರಿ 10 ಗಂಟೆಗೆ ಬೀಗ ಹಾಕಲಾಗಿತ್ತು. ಮಧ್ಯರಾತ್ರಿ ಚೋರರು ದೇವಾಲಯದ ಬಾಗಿಲು ಒಡೆದು ಗರ್ಭಗುಡಿಗೆ ನುಗ್ಗಿ ಆದಿಶಕ್ತಿ ದೇವಿಯ ವಿಗ್ರಹದ ಮೇಲಿದ್ದ ಆಭರಣಗಳನ್ನು ಕದ್ದೊಯ್ದಿದ್ದಾರೆ. ಇಂದು ಬೆಳಿಗ್ಗೆ ಎಂದಿನಂತೆ ಅರ್ಚಕರು ಪೂಜೆಗೆ ದೇವಾಲಯಕ್ಕೆ ಬಂದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಇಲವಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ