ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಡೈವೋರ್ಸ್ !

Kannada News

17-10-2017

ಹಾಸನ: ತನ್ನನ್ನು ಕೊಲಲ್ಲು ಪತಿ ಯತ್ನ ಮಾಡಿದ್ದಾನೆ ಎಂದು ಆರೋಪಿಸಿರುವ ಮಹಿಳೆಯೊಬ್ಬರು ಪತಿಯ ಅಂಗಡಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ಡಬಲ್ ಟ್ಯಾಂಕ್ ರಸ್ತೆಯಲ್ಲಿರುವ ರಾಘವೇಂದ್ರ ಹಾರ್ಡ್‍ವೇರ್ ಮಾಲಿಕ ಲೋಕೇಶ್ ಮತ್ತು ಪತ್ನಿ ದುರ್ಗಾಲಕ್ಷ್ಮಿ ಜಗಳ ಈಗ ಬೀದಿಗೆ ಬಿದ್ದಿದೆ. ಮೂರು ವರ್ಷಗಳ ಹಿಂದೆ ಮದುವೆಯಾಗಿರುವ ಲೋಕೇಶ್ ನನಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ ಮತ್ತು ಕೊಲೆಗೆ ಸಹ ಯತ್ನ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಲೋಕೇಶ್ ಮತ್ತು ದುರ್ಗಾಲಕ್ಷ್ಮಿ ಮದುವೆ ಆಗಿ ಮೂರು ವರ್ಷವಾಗಿದೆ. ಆರು ತಿಂಗಳು ಚೆನ್ನಾಗಿದ್ದ ಲೋಕೇಶ್ ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಈಗಾಗಲೆ ಡೈವೋರ್ಸ್ ನೋಟೀಸ್ ನೀಡಿದ್ದಾನೆ ಎಂದು ಪತ್ನಿ ಹೇಳಿದ್ದಾರೆ. ಮತ್ತು ಅಂಗಡಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

ಹಾಸನ ಅಕ್ರಮ ಸಂಬಂಧ ಡೈವೋರ್ಸ್ ಕೊಲೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ