ಖೈದಿಗಳ ದಿಢೀರ್ ಪ್ರತಿಭಟನೆ !

Kannada News

17-10-2017

ಬೆಂಗಳೂರು: ಹೊರಗಿನಿಂದ ಊಟ ತರಲು ಅವಕಾಶ ಕೊಡದೇ ಇರುವುದು ಮತ್ತು ದೀಪಾವಳಿ ಹಬ್ಬಕ್ಕೆ ಪೆರೋಲ್ ಮೇಲೆ ತೆರಳಲು ಅವಕಾಶ ನೀಡದೇ ಇರುವುದನ್ನು ವಿರೋಧಿಸಿ, ಪರಪ್ಪನ ಅಗ್ರಹಾರದಲ್ಲಿ ಖೈದಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಇಂದು ಬೆಳಗ್ಗೆ ದಿಢೀರ್ ಪ್ರತಿಭಟನೆ ಆರಂಭವಾದಾಗ ಜೈಲು ಅಧಿಕಾರಿಗಳು ತಬ್ಬಿಬ್ಬಾದರು.

ಜೈಲಿನಲ್ಲಿ ಊಟದ ಗುಣಮಟ್ಟ ಸರಿಯಿಲ್ಲ, ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಸುಧಾರಣೆಯಾಗಿಲ್ಲ, ವೈಯಕ್ತಿಕವಾಗಿ ಮನೆಯಿಂದ ಊಟ ತರಿಸಿಕೊಳ್ಳಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಜೈಲಿನ ಊಟ ತಿಂದು ಹಲವಾರು ಮಂದಿಗೆ ಆರೋಗ್ಯ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಪೆರೋಲ್ ಮೇಲೆ ಬಿಡುಗಡೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಅಷ್ಟೇಅಲ್ಲದೇ ಜೈಲಿನಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ, ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ, ಹೀಗಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ಕೈದಿಗಳು ಹೇಳಿದರು. ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಎಂ.ಎಸ್.ಮೇಘರಿಕ್ ಸ್ಥಳಕ್ಕೆ ತೆರಳಿ ಪ್ರತಿಭಟನಾ ನಿರತ ಖೈದಿಗಳ ಜೊತೆ ಮಾತುಕತೆ ನಡೆಸಿದರು.

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ