ಸಮುದಾಯದತ್ತ ಪೊಲೀಸ್ ಮತ್ತು ಪೊಲೀಸ್ ಸಬಲೀಕರಣ - ಸುಧಾರಿತ ಗಸ್ತು ವ್ಯವಸ್ಥೆ

Kannada News

30-03-2017 275

ಪೊಲೀಸರು ಜನಸ್ನೇಹಿಯಾಗಬೇಕು, ಪೊಲೀಸ್ ವ್ಯವಸ್ಥೆ ಸಮುದಾಯದತ್ತ ಚಲಿಸಬೇಕೆಂಬುದು ಸರ್ಕಾರದ ನೀತಿ. ಈ ನೀತಿಯನ್ನು ಜಾರಿಗೊಳಿಸಲು ಶೇಕಡಾ 90 ರಷ್ಟಿರುವ ಕಾನ್ಸ್‍ಟೇಬಲ್‍ಗಳು ಮತ್ತು ಹೆಡ್‍ಕಾನ್ಸ್‍ಟೇಬಲ್‍ಗಳನ್ನು ಜನಮುಖಿಗಳಾಗಿಸುವ ದೃಷ್ಟಿಯಿಂದ ಪೊಲೀಸ್ ಇಲಾಖೆಯ ‘ಗಸ್ತು ವ್ಯವಸ್ಥೆ’ (beat system) ಯ ರಚನೆ ಮತ್ತು ಕಾರ್ಯವಿಧಾನವನ್ನು ಬದಲಿಸಿ ಕ್ರಾಂತಿಕಾರಿಯೆನಿಸುವ ‘ಸುಧಾರಿತ ಗಸ್ತು ವ್ಯವಸ್ಥೆ’ಯನ್ನು ಜಾರಿಗೊಳಿಸಿ ಸರ್ಕಾರವು ದಿನಾಂಕ:21/03/2017 ರಂದು ಆದೇಶಿಸಿದೆ.
ಪ್ರತಿ ಪೊಲೀಸ್ ಠಾಣೆಯಲ್ಲಿರುವ ಕಾನ್ಸ್‍ಟೇಬಲ್ ಮತ್ತು ಹೆಡ್‍ಕಾನ್ಸಟೇಬಲ್ ರವರ ಒಟ್ಟು ಸಂಖ್ಯೆಗೆ ಸರಿಸಮವಾಗಿ ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ವಿಭಜಿಸಿ, ವಿಂಗಡಿಸಿ ಪ್ರತಿ ಪ್ರದೇಶವನ್ನು ‘ಬೀಟ್’ (ಗಸ್ತು) ಎಂದು ಪರಿಗಣಿಸಲಾಗಿದೆ. ಆಯಾ ಠಾಣೆಯ ಪ್ರತಿ ಕಾನ್ಸ್‍ಟೇಬಲ್ ಅಥವಾ ಹೆಡ್‍ಕಾನ್ಸ್‍ಟೇಬಲ್ ರವರಿಗೆ ಆಯಾ ಬೀಟ್‍ನ ಹೊಣೆಗಾರಿಕೆಯನ್ನು ನೀಡಿದ್ದು, ಆಯಾ ಬೀಟಿನ ಎಲ್ಲಾ ಪೊಲೀಸ್ ಕರ್ತವ್ಯಾಧಿಕಾರಿಗಳನ್ನು ಮತ್ತು ಸಂಪೂರ್ಣ ಜವಬ್ದಾರಿಯನ್ನು ಅವರಿಗೇ ನೀಡಲಾಗಿದೆ. ಇದರಿಂದ ತಳಹಂತದ ಸಿಬ್ಬಂದಿಗಳ ಸಬಲೀಕರಣ (empowerment) ಸಾಕಾರವಾಗಲಿದೆ.
ಆಯಾ ಬೀಟ್(ಗಸ್ತು)ನಲ್ಲಿ ಬರುವ ಗ್ರಾಮಗಳು ಅಥವಾ ಪ್ರದೇಶಗಳಲ್ಲಿ ಎಲ್ಲಾ ಧರ್ಮ, ಜಾತಿ ವಯೋಮಾನಕ್ಕೆ ಸೇರಿದ ಸೂಕ್ತವೆನಿಸುವಷ್ಟು ಸಂಖ್ಯೆಯ ಸ್ತ್ರೀ ಪುರುಷರನ್ನು ಸಮುದಾಯದಿಂದ ‘ನಾಗರಿಕ ಸದಸ್ಯ’ರನ್ನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಬೀಟ್(ಗಸ್ತು)ನ ಸಿಬ್ಬಂದಿಗಳು ಈ ಸದಸ್ಯರೊಡನೆ ಸತತ ಸಂಪರ್ಕದಲ್ಲಿದ್ದು, ಆಯಾ ಬೀಟ್ ಪ್ರದೇಶಗಳ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆದು ಕಾರ್ಯೋನ್ಮುಖರಾಗುವ ಅವಕಾಶ ಮಾಡಿಕೊಡಲಾಗಿದೆ. ಜನರು ಪೊಲೀಸರ ನಡುವೆ ಬಾಂಧವ್ಯದ ಸೇತುವೆ ಕಟ್ಟಲು ಈ ವ್ಯವಸ್ಥೆ ಅವಕಾಶ ಮಾಡಿಕೊಡುವುದರ ಮೂಲಕ ಸಮುದಾಯದತ್ತ ಪೊಲೀಸ್-ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸಾಕಾರಗೊಳಿಸುವುದರ ಜೊತೆಗೆ ಪೊಲೀಸರ ಸಬಲೀಕರಣಕ್ಕೂ ನಾಂದಿ ಹಾಡಿದೆ. ಸರ್ಕಾರ ಜಾರಿಗೆ ತಂದಿರುವ ಸುಧಾರಿತ ಗಸ್ತು(ಬೀಟ್) ವ್ಯವಸ್ಥೆಯ ಮೂಲಕ ಇನ್ನು ಮುಂದೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ‘ಗಸ್ತು(ಬೀಟ್) ಪ್ರದೇಶ’ವೇ ಅತ್ಯಂತ ಸಣ್ಣ ಘಟಕವಾಗಲಿದೆ. ಆಯಾ ಗಸ್ತಿ(ಬೀಟ್)ನ ಕಾನ್ಸಟೇಬಲ್ ಅಥವಾ ಹೆಡ್‍ಕಾನ್ಸ್‍ಟೇಬಲ್‍ಗಳು ಗಸ್ತಿ(ಬೀಟ್)ನ ಪೊಲೀಸ್ ಪ್ರಮುಖರಾಗಿ ಕಾರ್ಯನಿರ್ವಹಿಸಲಿದ್ದಾರೆ. ಜನಸ್ನೇಹಿ ಅಂಶ ಮತ್ತು ಪೊಲೀಸ್ ಸಿಬ್ಬಂದಿಗಳ ಸಬಲೀಕರಣದ ಸಮತೋಲನವನ್ನು ಒಳಗೊಂಡಿರುವ ಸುಧಾರಿತ ಗಸ್ತುವ್ಯವಸ್ಥೆಯು ಪೊಲೀಸ್ ಕಾರ್ಯವೈಖರಿಯನ್ನು ಬದಲಿಸುವ ಕ್ರಾಂತಿಕಾರಿ ವ್ಯವಸ್ಥೆಯಾಗಿದೆ.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ