ಸದಾ ‘ಸಿದ್ದ’ ಸರ್ಕಾರ…?

Kannada News

17-10-2017

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಚುನಾವಣಾ ರಣ ಕಣಕ್ಕೆ ಸಿದ್ಧವಾಗುತ್ತಿವೆ. ಈ ಎಲ್ಲಾ ಪಕ್ಷಗಳ ನಾಯಕರು, ಮತ್ತೊಂದು ಹೋರಾಟಕ್ಕೆ ತಮ್ಮನ್ನು ತಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ.

ಇದೇ ಸಂದರ್ಭದಲ್ಲಿ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ, ತನ್ನ ಸಾಧನೆಗಳನ್ನು ಬಿಂಬಿಸಲು ಜಾಹೀರಾತುಗಳನ್ನು ಬಿಡುಗಡೆ ಮಾಡಿದೆ.

ನವ ಕರ್ನಾಟಕ ನಿರ್ಮಾಣಕ್ಕೆ ಸದಾ ‘ಸಿದ್ದ’ ಸರ್ಕಾರ ಎಂಬ ಪ್ರಚಾರ ವಾಕ್ಯವನ್ನು ಮಾಧ್ಯಮಗಳೂ ಸೇರಿದಂತೆ ಎಲ್ಲೆಡೆ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಪ್ರಚಾರ ವಾಕ್ಯದಲ್ಲಿ ‘ಸಿದ್ಧ’ ಅನ್ನುವುದರ ಬದಲಿಗೆ ‘ಸಿದ್ದ’ ಎಂಬ ಪದ ಪ್ರಯೋಗ ಮಾಡಲಾಗಿದೆ. ಮೇಲುನೋಟಕ್ಕಂತೂ ಇದರಲ್ಲಿ ಯಾವ ತಪ್ಪೂ ಕಾಣಿಸುವುದಿಲ್ಲ. ಆದರೆ, ಸರಿಯಾಗಿ ಗಮನಿಸಿದರೆ ಇಲ್ಲಿ ‘ಸಿದ್ದ’ ಎಂಬ ಪದವನ್ನು ಸಿದ್ದರಾಮಯ್ಯನವರನ್ನು ಸೂಚಿಸುವ ಪದವಾಗಿ ಬಳಕೆ ಮಾಡಿರುವುದು ಕಂಡುಬರುತ್ತದೆ. ಆದರೆ, ಯಾರಾದರೂ ಕೂಡ ಇದನ್ನು ಪ್ರಶ್ನಿಸಿದರೆ, ಇದು ಅಕಸ್ಮಾತ್ ಆಗಿರುವ ಒಂದು ಸಣ್ಣ ವ್ಯತ್ಯಾಸವೆಂದು ಹೇಳಿ, ತಳ್ಳಿಹಾಕಿಬಿಡಬಹುದು. ಹೀಗಾಗಿ, ಸಿದ್ದರಾಮಯ್ಯ ಸರ್ಕಾರದ ಸಲಹೆಗಾರರು, ಇಲ್ಲೊಂದು ಸೂಕ್ಷ್ಮ ಕುಸುರಿ ಕೆಲಸ ಮಾಡಿದ್ದಾರೆಂದು ಹೇಳಬಹುದು. ಸದಾ ‘ಸಿದ್ದ’ ಸರ್ಕಾರ ಎಂದು ಹೇಳುವ ಮೂಲಕ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಮತ್ತೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂಬುದನ್ನು ಈ ರೀತಿಯಲ್ಲಿ ಸಾರುವ ಪ್ರಯತ್ನಗಳು ಇಲ್ಲಿ ನಡೆದಿರುವುದು ನಿಚ್ಚಳವಾಗಿ ಕಂಡುಬರುತ್ತದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ