ವಂಚಕ ದಂಪತಿ ಆತ್ಮಹತ್ಯೆ !

Kannada News

17-10-2017

ತುಮಕೂರು: ಬಹುಕೋಟಿ ಚೀಟಿ ವ್ಯವಹಾರ ವಂಚಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು, ತುಮಕೂರು ಜಿಲ್ಲೆ‌ಯ ಕೊರಟಗೆರೆಯಲ್ಲಿ ನಡೆದಿದೆ. ಪ್ರಭಾ(42) ಹಾಗೂ ರವಿ (48) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳು. ಪ್ರಭಾ ವಿಷ ಕುಡಿದು ಹಾಗೂ ರವಿ ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ರಾಜ್ಯದಲ್ಲೇ ಅತಿದೊಡ್ಡ ಎನ್ನಲಾದ ಚೀಟಿ ವಂಚನೆ ನಡೆಸಿದ್ದರು. ಕೋಟ್ಯಂತರ ರೂ. ಅವ್ಯವಹಾರ ನಡೆಸಿ ನಾಪತ್ತೆಯಾಗಿದ್ದ ದಂಪತಿ, ಸುಮಾರು 250 ಕ್ಕೂ ಹೆಚ್ಚು ಜನರಿಗೆ ಚೀಟಿ ವ್ಯವಹಾರದಲ್ಲಿ ಮೋಸ ಮಾಡಿದ್ದಾರೆ, ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ಜೈಲಿನಿಂದ ಜಾಮೀನಿನ ಮೇಲೆ ದಂಪತಿ ಹೊರಬಂದಿದ್ದರು. ಪ್ರತಿನಿತ್ಯ ಚೀಟಿ ವ್ಯವಹಾರಸ್ಥರು ಮನೆಗೆ ಹೋಗಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು, ಇದರಿಂದ ಕಂಗೆಟ್ಟ ದಂಪತಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ