‘ಪ್ರಧಾನಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ’

Kannada News

16-10-2017

ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ನಡೆದ ಹೋರಾಟ ಭಾರತದಲ್ಲಿ ಒಂದು ಇತಿಹಾಸ, ಇಷ್ಟೊಂದು ದೀರ್ಘಕಾಲದ ಹೋರಾಟ ಯಾವುದು ನಡೆದಿಲ್ಲಾ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಕಳಸಾ-ಬಂಡೂರಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಅಕ್ಟೋಬರ್ ‌21 ರಂದು‌ ರಾಜಭವನ ಮುತ್ತಿಗೆ ಹಾಕಲಾಗುವದು, ದೇಶದ ಪ್ರಧಾನಿಗಳಿಗೆ ಚುನಾವಣೆ ಬಿಟ್ರೆ ರಾಜ್ಯದ ಅಭಿವೃಧಿ ಬಗ್ಗೆ ಕಾಳಜಿ ಇಲ್ಲ ಎಂದು ಹರಿಹಾಯ್ದರು, ಪ್ರಧಾನಿ ನರೇಂದ್ರ ಮೋದಿ ಯೋಜನೆ ಬಗ್ಗೆ ಮದ್ಯಪ್ರವೇಶ ಮಾಡಬೇಕಾಗಿತ್ತು. ಆದ್ರೆ ಅವರು ಬರದಿರುವದು ಒಕ್ಕೂಟ ವ್ಯವಸ್ಥೆಗೆ ಅಗೌರವ, ಮುಂದಿನ ದಿನಗಳಲ್ಲಿ ಕನ್ನಡ ಪರ ಸಂಘಟನೆಗಳಿಂದ ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ನಮ್ಮ ಸಂಸದರಿಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡಲು ಬರುವದಿಲ್ಲ, ಅದರಲ್ಲೂ ಬಿಜೆಪಿಯವರು ತೀರಾ ಸುಮ್ಮನಿದ್ದಾರೆ ಎಂದು ಟೀಕಿಸಿದರು.

ಇನ್ನು ಕರ್ನಾಟಕ ಶಾಸನಸಭೆಯ ವಜ್ರಮಹೋತ್ಸವ ಬೇಕಾಗಿರಲಿಲ್ಲ, ಕರ್ನಾಟಕದಲ್ಲಿ ರೈತರು ಸಂಕಷ್ಟದಲ್ಲಿರುವಾಗ ಅದು ಬೇಕಾಗಿಲ್ಲ. ಶಾಸಕರಿಗೆ ಚಿನ್ನದ ಬಿಸ್ಕೇಟ್ ಕೊಡುವದು ಬೇಕಾಗಿಲ್ಲ, ಏಕೆಂದ್ರೆ ಅಸೆಂಬ್ಲಿಯಲ್ಲಿರುವರೆಲ್ಲಾ ಚಿನ್ನದ ಬಿಸ್ಕೇಟ್ ಹೊಂದಿದ್ದಾರೆ, ಅವರಿಗೆ ಚಿನ್ನದ ಬಿಸ್ಕೇಟ್ ನೀಡುವ ಸಮಂಜಸವಲ್ಲಾ, ಅದಕ್ಕೆ ನನ್ನ ವಿರೋಧವಿದೆ ಎಂದರು. ನಮ್ಮ ಸ್ಪೀಕರ್ ಗೆ ಯಾರು ಸಲಹೆ ಕೊಡುತ್ತಾರೋ ಗೊತ್ತಿಲ್ಲ, ತರಾತುರಿಯಲ್ಲಿ ಮಾಡುವದು ಸರಿಯಲ್ಲ. ಅದನ್ನ ಕೂಡಲೆ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ