ಲಕ್ಷ್ಮಿ ಹೆಬ್ಬಾಳ್ಕರ್‌ ಗೆ ಕೊಕ್ ?

Kannada News

16-10-2017

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೆಳಗಿಸಬೇಕು ಎಂಬ ಕೂಗು ಶುರುವಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಾ.ಪರಮೇಶ್ವರ್ ಇಬ್ಬರೂ ಬೆಂಬಲಕೊಟ್ಟಿದ್ದಾರೆಂದು ಹೇಳಲಾಗಿದೆ. ರಾಜ್ಯ ಮಹಿಳಾ ಕಾಂಗ್ರೆಸ್  ಕಾರ್ಯದರ್ಶಿಯಾಗಿರುವ ಡಾ. ನಾಗಲಕ್ಷ್ಮಿಗೆ ಅಧ್ಯಕ್ಷೆಯಾಗುವ ಅದೃಷ್ಟ ಒದಗಿಬರುವ ಸಾಧ್ಯತೆಗಳಿವೆ.

ಬೆಳಗಾವಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದ ಆರೋಪ ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಹಣ ಹಂಚುತ್ತಿದ್ದರೆಂಬ ಆರೋಪವೂ ಲಕ್ಷ್ಮಿ ಹೆಬ್ಬಾಳ್ಕರ್ ಮೇಲಿದೆ. ಇದರ ಜೊತೆಗೆ ಆದಾಯ ತೆರಿಗೆ ದಾಳಿಗೊಳಗಾಗಿದ್ದ ವಿಚಾರವೂ ಸೇರಿದೆ. ರಾಜಕಾರಣದಲ್ಲಿ ಹೆಸರಾಗಿರುವ ಜಾರಕಿಹೊಳಿ ಸೋದರು ಮತ್ತು ಕುಟುಂಬಗಳ ನಡುವೆಯೂ ವಿರಸ ಸೃಷ್ಟಿಸುತ್ತಿದ್ದಾರೆ ಎಂಬ  ಗಂಭೀರ ಆರೋಪವೂ ಲಕ್ಷ್ಮಿ ಹೆಬ್ಬಾಳ್ಕರ್ ಮೇಲಿದೆ.

ರಾಜ್ಯಾಧ್ಯಕ್ಷೆಯಾಗಿ ರಾಜ್ಯದಲ್ಲಿ ಸಂಚಾರ ಮಾಡುತ್ತಿಲ್ಲ ಕೇವಲ ಬೆಳಗಾವಿಗೆ ಮಾತ್ರ ಸೀಮಿತವಾಗಿದ್ದಾರೆ. ಇದಲ್ಲದೆ ಜನರ ಮೇಲೂ ದರ್ಪ ತೋರಿಸುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಪದೇ ಪದೇ ಮುಜುಗರ ತರುತ್ತಿದೆ. ಹೀಗಾಗಿ ಪಕ್ಷವೂ ಇವರನ್ನು ಸಮರ್ಥನೆ ಮಾಡಿಕೊಳ್ಳಲು ಆಗುತ್ತಿಲ್ಲ. ಇವೆಲ್ಲಾ ಕಾರಣಗಳಿಂದಾಗಿ ಇವರನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕು ಅನ್ನುವ ವಿಚಾರವನ್ನು ಸಿದ್ದು-ಪರಂ ಇಬ್ಬರೂ ಬೆಂಬಲಿಸಿದ್ದರೂ, ಪವರ್ ಫುಲ್ ಸಚಿವರೊಬ್ಬರು ಇದಕ್ಕೆ ಅಡ್ಡಗಾಲಿಟ್ಟು , ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ.  ಹೀಗಿದ್ದರೂ, ಲಕ್ಷ್ಮಿ ಹೆಬ್ಬಾಳ್ಕರ್ ಸ್ಥಾನಕ್ಕೆ, ಪರಮೇಶ್ವರ್ ಬೆಂಬಲ ಹೊಂದಿರುವ ದಂತ ವೈದ್ಯೆ ಡಾ.ನಾಗಲಕ್ಷ್ಷಿಯವರನ್ನು ತರಲು ಬಿರುಸಿನ ಪ್ರಯತ್ನಗಳು ಸಾಗಿವೆ.

ವರದಿ: ಜಿ.ಆರ್.ಸತ್ಯಲಿಂಗರಾಜುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Don't change in this crucial election time because LINGAYAT community become anticongress especially ladies. So don't take this decision now.
  • Nagaraj Rudrappa Sidnal urf Dodawad
  • Agriculture