ಪಿಸ್ತೂಲ್ ಕದ್ದೊಯ್ದ ಕೆಲಸಗಾರ !

Kannada News

16-10-2017

ಬೆಂಗಳೂರು: ಯಲಹಂಕ ಉಪನಗರದ ಪುಟ್ಟೇನಹಳ್ಳಿಯಲ್ಲಿ ನಿನ್ನೆ ಸಂಜೆ ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿದ್ದ ಪಿಸ್ತೂಲು ಹಾಗೂ ಹಣವಿದ್ದ ಹುಂಡಿಯನ್ನು ಮನೆ ಕೆಲಸಗಾರನೊಬ್ಬ ದೋಚಿ ಪರಾರಿಯಾಗಿದ್ದಾನೆ. ಪುಟ್ಟೇನಹಳ್ಳಿಯ ಹೌಸಿಂಗ್ ಬೋರ್ಡ್ ಕಾಲನಿಯ ಖಾಸಗಿ ಶಾಲಾ ಮಾಲೀಕ ಸತೀಶ್ಚಂದ್ರ ಅವರ ಮನೆಯಲ್ಲಿ ಕೆಲಸಕ್ಕಿದ್ದ ಪ್ರಸನ್ನ ಎಂಬಾತ ಪರವಾನಿಗೆ ಪಡೆದಿದ್ದ  ಪಿಸ್ತೂಲ್ ಹಾಗೂ ಸುಮಾರು 1 ಲಕ್ಷ ರೂ.ವರೆಗೆ ಹಣ ಹಾಕಿದ್ದ ಹುಂಡಿಯನ್ನು ದೋಚಿ ಪರಾರಿಯಾಗಿದ್ದಾನೆ.

ಸುಬ್ರಹ್ಮಣ್ಯ ಅವರ ವಯಸ್ಸಾದ ತಾಯಿಯನ್ನು ಕೆಲವು ವರ್ಷಗಳಿಂದ ಪ್ರಸನ್ನ ನೋಡಿಕೊಳ್ಳುತ್ತಾ, ಮನೆ ಕೆಲಸ ಮಾಡಿಕೊಂಡು ವಿಶ್ವಾಸ ಗಳಿಸಿದ್ದ. ಬ್ರೈನ್‍ಟ್ಯೂಮರ್, ಮೂಳೆರೋಗ(ಪೈಲ್ಸ್)ದಿಂದ ಬಳಲುತ್ತಿದ್ದ ಪ್ರಸನ್ನಗೆ ಸತೀಶ್ಚಂದ್ರ ಅವರೇ ಚಿಕಿತ್ಸೆ ಕೊಡಿಸುತ್ತಿದ್ದರು.

ಆದರೂ ನಿನ್ನೆ ಪ್ರಸನ್ನ ನನಗಿರುವ ಖಾಯಿಲೆ ಗುಣಮುಖವಾದ ನಂತರ ಕಳವು ಮಾಡಿರುವ ಪಿಸ್ತೂಲ್ ಹಾಗೂ ಹಣವನ್ನು ವಾಪಾಸು ಕೊಡುತ್ತೇನೆ ಎಂದು ಪತ್ರ ಬರೆದಿಟ್ಟು ಪರಾರಿಯಾಗಿದ್ದಾನೆ. ಪ್ರಸನ್ನನ ಹಿನ್ನೆಲೆ ತಿಳಿಯದೆ ಅವರು ಸತೀಶ್ಚಂದ್ರ ಅವರು ಕೆಲಸಕ್ಕೆ ಇಟ್ಟುಕೊಂಡಿದ್ದರು. ಅವರ ವಯಸ್ಸಾದ ತಾಯಿ ಮಾತ್ರ ಮನೆಯಲ್ಲಿದ್ದ ವೇಳೆ ಈ ದುರ್ಘಟನೆ ಸಂಬವಿಸಿದೆ, ಪ್ರಕರಣ ದಾಖಲಿಸಿರುವ ಯಲಹಂಕ ಉಪನಗರ ಪೊಲೀಸರು ಪರಾರಿಯಾಗಿರುವ ಪ್ರಸನ್ನನಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ