ನದಿ ತೊರೆಯಲ್ಲಿ ಕೊಚ್ಚಿಹೋದ ಯುವಕ !

Kannada News

16-10-2017

ಬೆಂಗಳೂರು: ನಗರದ ಹೊರವಲಯದ ನೆಲಮಂಗಲದ ಬಳಿ ಹಾಲು ಹಾಕಲು ಹೋಗಿ ಕುಮುದ್ವತಿ ನದಿ ತೊರೆಯಲ್ಲಿ ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ. ನೆಲಮಂಗಲ ತಾಲ್ಲೂಕಿನ ಚೌಡಸಂದ್ರ ಗ್ರಾಮದ ಬಳಿಯ ತೊರೆಯಲ್ಲಿ ಘಟನೆ ನಡೆದಿದೆ. ಬೀದನಪಾಳ್ಯ ಗ್ರಾಮದ ನಿವಾಸಿ ಮಂಜುನಾಥ್ (21) ಮೃತ ದುರ್ದೈವಿಯಾಗಿದ್ದಾನೆ.

ನಿನ್ನೆ ಸಂಜೆ ಸುಮಾರು 6 ಗಂಟೆಗೆ  ಸುಮಾರಿಗೆ ಬೀದನಪಾಳ್ಯದಿಂದ ಚೌಡಸಂದ್ರಕ್ಕೆ ಹಾಲು ಹಾಕಲು ಬಂದು ವಾಪಸ್ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇನ್ನೂ ಯುವಕ ಕೊಚ್ಚಿ ಹೋಗಿರುವ ಬಗ್ಗೆ ಯಾರಿಗೂ ಗೊತ್ತಾಗದಿದ್ದು, ಇಂದು ಬೆಳಿಗ್ಗೆ ತೊರೆಯ ದಡದಲ್ಲಿ ಯುವಕನ ಶವ ತೇಲಿ ಬಿದ್ದಿದ್ದು, ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಮೃತ ಯುವಕನ ಶವವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ