ಊಟ ತಿಂದಿದ್ದಕ್ಕೆ ಕೊಲೆ !

Kannada News

16-10-2017

ಬೆಂಗಳೂರು: ಮತ್ತಿಕೆರೆಯ ಎಂ.ಎಸ್.ರಾಮಯ್ಯ ಆಸ್ಪತ್ರೆಯ ವಿದ್ಯಾರ್ಥಿ ನಿಲಯದಲ್ಲಿ ನಿನ್ನೆ ರಾತ್ರಿ ಹೊಟೇಲ್‍ ನಿಂದ ತಂದು ಕೊಠಡಿಯಲ್ಲಿಟ್ಟಿದ್ದ ಊಟವನ್ನು ಸಹೋದ್ಯೋಗಿಯೊಬ್ಬ ಕೇಳದೆ ತಿಂದಿದ್ದರಿಂದ ರೊಚ್ಚಿಗೆದ್ದ ಸೆಕ್ಯುರಿಟಿ ಗಾರ್ಡ್‍ವೊಬ್ಬ ತನ್ನ ಸಹೋದ್ಯೋಗಿಯನ್ನು ಕೊಲೆಗೈದ ದುರ್ಘಟನೆ ನಡೆದಿದೆ.

ಕೊಲೆಯಾದ ಭದ್ರತಾ ಸಿಬ್ಬಂದಿಯನ್ನು ನೇಪಾಳ ಮೂಲದ ಬಿನೋದ್ (25)ಎಂದು ಗುರುತಿಸಲಾಗಿದೆ. ಈತನನ್ನು ಕೊಲೆಗೈದ ದೆಹಲಿ ಮೂಲದ ತುಷಾರ್ ಸಿಂಗ್ ಎಂಬಾತನ್ನು ಸದಾಶಿವನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸನ್ ಪವರ್ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಬಿನೋದ್ ಹಾಗೂ ತುಷಾರ್ ಸಿಂಗ್ ಎಂಬವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯದ ಭದ್ರತೆಗೆ ನಿಯೋಜಿಸಲಾಗಿತ್ತು. ಇವರಿಬ್ಬರೂ ಒಂದೇ ಕೊಠಡಿಯಲ್ಲಿ ನೆಲೆಸಿದ್ದರು. ಕಳೆದ ರಾತ್ರಿ 11 ಗಂಟೆ ಸುಮಾರಿಗೆ ತುಷಾರ್ ಸಿಂಗ್ ಹೊಟೇಲ್‍ನಿಂದ ಊಟ ಕಟ್ಟಿಸಿಕೊಂಡು ಬಂದು ಕೊಠಡಿಯಲ್ಲಿಟ್ಟು ಕೆಲಸಕ್ಕೆ ಹೋಗಿದ್ದ.

ಈ ವೇಳೆ ಬಂದ ಬಿನೋದ್ ಕೊಠಡಿಯಲ್ಲಿದ್ದ ಊಟ ಮಾಡಿ ಮಲಗಿದ್ದ. ಸ್ವಲ್ಪ ಸಮಯದ ಬಳಿಕ ತುಷಾರ್ ಸಿಂಗ್ ಊಟ ಮಾಡಲೆಂದು ಕೊಠಡಿಗೆ ಬಂದಿದ್ದಾನೆ. ಮೊದಲೇ ಹಸಿವೆಯಲ್ಲಿದ್ದ ತುಷಾರ್ ಸಿಂಗ್ ಕೊಠಡಿಯಲ್ಲಿ ಖಾಲಿ ಪೊಟ್ಟಣ ಇದ್ದುದನ್ನು ಕಂಡು ರೊಚ್ಚಿಗೆದ್ದು ಮಲಗಿದ್ದ ಬಿನೋದ್‍ ನನ್ನು ಎಬ್ಬಿಸಿ ಜಗಳವಾಡಿದ್ದಾನೆ. ನಿದ್ರೆಯ ಮಂಪರಿನಲ್ಲಿದ್ದ ಬಿನೋದ್ ಮುಖಕ್ಕೆ ತುಷಾರ್ ಬಲವಾಗಿ ಗುದ್ದಿ, ಕಾಲಿನಿಂದ ಒದ್ದಿದ್ದಾನೆ. ಈ ಹೊಡೆತ ಬಿನೋದ್‍ ನ ಮರ್ಮಾಂಗಕ್ಕೆ  ತಗುಲಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸದಾಶಿವನಗರದ ಪೊಲೀಸ್ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ಗೌಡ ಅವರು, ಆರೋಪಿಯನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ