ತೀರ್ಥೋದ್ಭವ ನೋಡಲು ತುದಿಗಾಲಲ್ಲಿ ಭಕ್ತರು !

Kannada News

16-10-2017

ಮಡಿಕೇರಿ: ಜೀವನದಿ, ಕಾವೇರಿಯ ಉಗಮಸ್ಥಾನ ತಲಕಾವೇರಿ ಕ್ಷೇತ್ರದ ಬ್ರಹ್ಮಕುಂಡಿಕೆಯಲ್ಲಿ ಅಕ್ಟೋಬರ್.17ರ ಮಧ್ಯಾಹ್ನ 12.33ಕ್ಕೆ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

ಕಾವೇರಿ ತೀರ್ಥೋದ್ಭವಕ್ಕೆ ತಲಕಾವೇರಿ-ಭಗಂಡೇಶ್ವರ ಕ್ಷೇತ್ರ ಸಜ್ಜುಗೊಳ್ಳುತ್ತಿದೆ. ಜಿಲ್ಲಾಡಳಿತ, ಕೊಡಗು ಪೊಲೀಸ್, ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಂತಿಮ ಸಿದ್ಧತಾ ಕಾರ್ಯದಲ್ಲಿ ತಲ್ಲೀನವಾಗಿವೆ.

ಮಧ್ಯಾಹ್ನ ವೇಳೆ ತೀರ್ಥೋದ್ಭವ ಆಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಬ್ರಹ್ಮಕುಂಡಿಕೆಯಲ್ಲಿ ನಡೆಯುವ ಪೂಜಾ ಕೈಂಕರ್ಯದ ದೃಶ್ಯಾವಳಿ ವೀಕ್ಷಿಸಲು ತಲಕಾವೇರಿ ಕ್ಷೇತ್ರದಲ್ಲಿ ಎರಡು ಬೃಹತ್ ಪರದೆ ಅಳವಡಿಸಲಾಗುತ್ತಿದೆ. ಮಳೆ ಬಂದಲ್ಲಿ ಭಕ್ತರಿಗೆ ಆಶ್ರಯ ಕಲ್ಪಿಸಲು ವಾಟರ್​ಪ್ರೂಫ್ ಸಭಾಂಗಣ, ಕ್ಷೇತ್ರದಲ್ಲಿ ತಾತ್ಕಾಲಿಕವಾಗಿ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ತಲಾ 5 ಶೌಚಗೃಹ ನಿರ್ವಿುಸಲಾಗುತ್ತಿದೆ. ಭಕ್ತರಿಗೆ ಕುಡಿವ ನೀರಿಗೆ ಸಮಸ್ಯೆಯಾಗದಂತೆ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

 ಇನ್ನು ಭಾಗಮಂಡಲದಿಂದ ತಲಕಾವೇರಿ ಕ್ಷೇತ್ರಕ್ಕೆ ಭಕ್ತರನ್ನು ಕರೆದುಕೊಂಡು ಬರಲು 30 ಕೆಎಸ್​ಆರ್​ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ಪಾಸ್ ಪಡೆದ ವಾಹನಗಳಿಗೆ ಮಾತ್ರ ತಲಕಾವೇರಿ ಕ್ಷೇತ್ರಕ್ಕೆ ಆಗಮಿಸಲು ಅನುವು ಮಾಡಿಕೊಡಲಾಗುತ್ತದೆ.

ಮಧ್ಯಾಹ್ನ ವೇಳೆ ತೀರ್ಥೋದ್ಭವ ಆಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಮತ್ತು ಶಾಂತಿ ಕಾಪಾಡಲು ಬಂದೋಬಸ್ತ್ ಒದಗಿಸಲಾಗುತ್ತದೆ, ಮತ್ತು ಹೋಂಗಾರ್ಡ್, ಎನ್​ಸಿಸಿ ಸ್ವಯಂಸೇವಕರ ಸಹಕಾರ ಪಡೆದುಕೊಳ್ಳಲಾಗುತ್ತದೆ ಎಂದು, ದೇವಾಲಯ ವ್ಯವಸ್ಥಾಪನಾ ಸಮಿತಿ ತಿಳಿಸಿದೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ