ಭಯೋತ್ಪಾದನೆಗೆ ನೆರವು: ಮನೆ ಮುಟ್ಟುಗೋಲು !

Kannada News

16-10-2017

ಮಂಗಳೂರು: ಇಂಡಿಯನ್‌ ಮುಜಾಹಿದ್ದೀನ್‌ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ, ಬಿಹಾರದ ಲಖಿಸರಾಯ್‌ ಪೊಲೀಸರಿಂದ ಬಂಧಿತರಾಗಿದ್ದ ಆಯೇಷಾ ಬಾನು ಮತ್ತು ಝುಬೈರ್‌ ದಂಪತಿಯ, ಮಂಗಳೂರಿನ ಪಂಜಿಮೊಗರುವಿನಲ್ಲಿ ಹೊಂದಿರುವ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ ಪ್ರಾರಂಭಿಸಿದೆ.

ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಪ್ರಾಥಮಿಕ ಹಂತದ ಪ್ರಕ್ರಿಯೆ ಆರಂಭಿಸಿರುವ ಇ.ಡಿ ಅಧಿಕಾರಿಗಳು, ಈ ಸಂಬಂಧ ಕಂದಾಯ ಇಲಾಖೆಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಅವರ ಕೋರಿಕೆಯಂತೆ ಪಂಜಿಮೊಗರುವಿನಲ್ಲಿರುವ ಆಯೇಷಾ ಮನೆಗೆ ಭೇಟಿ ನೀಡಿರುವ ಕಂದಾಯ ಇಲಾಖೆ ಸಿಬ್ಬಂದಿ, ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ವರದಿಯೊಂದನ್ನು ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ