‘ಮುಂದಿನ ದೀಪಾವಳಿಗೆ ರಾಮ ಮಂದಿರ ಪೂರ್ಣ’

Kannada News

16-10-2017

ಪಾಟ್ನಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಆರಂಭಗೊಳ್ಳಲಿದ್ದು, ಮುಂದಿನ ವರ್ಷದ ದೀಪಾವಳಿಯ ವೇಳೆಗೆ ಭಕ್ತರ ಆಗಮನಕ್ಕೆ ಸಿದ್ಧವಾಗಲಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ವಿರಾಟ್ ಹಿಂದುಸ್ತಾನ್ ಸಂಗಮ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ರಾಮ ಮಂದಿರ ನಿರ್ಮಾಣಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿದ್ದು, ದೇವಾಲಯ ನಿರ್ಮಾಣ ಕಾರ್ಯ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎಂದಿದ್ದಾರೆ.

ಈ ವಾರ ನಾವು ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಮುಂದಿನ ದೀಪಾವಳಿಯ ವೇಳೆಗೆ ರಾಮ ಮಂದಿರಕ್ಕೆ ಭಕ್ತರನ್ನು ಬರಮಾಡಿಕೊಳ್ಳಲು ಸಿದ್ಧವಾಗುವ ನಿರೀಕ್ಷೆಯಿದೆ ಎಂದರು. ಇದೇ ವೇಳೆ ಚುನಾವಣೆ ಯಶಸ್ಸಿಗೆ ಹಿಂದುತ್ವ ಸಿದ್ಧಾಂತ ಅತಿ ಮಹತ್ವದ್ದಾಗಿದೆ, ಇದರಿಂದ ವಿಮುಖವಾಗುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ