ಕನ್ನಡ ಬಿಗ್ ಬಾಸ್ ಗೂ ಕಿರಿಕ್!

Kannada News

15-10-2017 1032

ಕಲರ್ಸ್ ಸೂಪರ್ ಕನ್ನಡ ಚಾನಲ್ ನಲ್ಲಿ ಈ ಬಾರಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತಮಿಳು ಮತ್ತು ಹಿಂದಿಯಲ್ಲಿ ಆಗುತ್ತಿರುವಂತೆ ಇಲ್ಲೂ ಕಿರಿಕ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತಮಿಳ್ ಬಿಗ್ ಬಾಸ್ ನಲ್ಲಿ ಕಮಲ್ ಹಾಸನ್ ವಿರುದ್ಧ ಮತ್ತು ಹಿಂದಿ ಬಿಗ್ ಬಾಸ್ ನಲ್ಲಿ ಸಲ್ಮಾನ್ ಖಾನ್ ವಿರುದ್ಧ ಕೇಸ್ ಹಾಕಲ್ಪಟ್ಟಿರುವ ಹಿನ್ನೆಲೆಯಲ್ಲಿ ಕನ್ನಡ ಬಿಗ್ ಬಾಸ್ ನಲ್ಲೂ ಅಂಥ ಅವಾಂತರಗಳು ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕನ್ನಡ ಪ್ರೇಕ್ಷಕ ಮೃದು ಹೃದಯಿ ಎಂಬ ಹಣೆ ಪಟ್ಟಿ ಕಟ್ಟಿಕೊಂಡು ಕೆಲವೊಮ್ಮೆ ಬಿಗ್ ಬಾಸ್ ಕಾರ್ಯಕ್ರಮದ ಅತಿರೇಕಗಳನ್ನು ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುತ್ತಿದ್ದುದುಂಟು, ಆದರೆ ಬಿಗ್ ಬಾಸ್ ಕಾರ್ಯಕ್ರಮನ್ನು ಕಾನೂನಿನ ಮೂಲಕ ಹಣಿಯಬಹುದು ಎಂಬ ಮಾಹಿತಿಯನ್ನು ಈಗಾಗಲೇ ಬೇರೆ ಕಡೆಯಿಂದ ಪಡೆದಿರುವ ಪಡೆದಿರುವ ಪ್ರೇಕ್ಷಕ ಇನ್ನು ಮುಂದೆ ತನಗೆ ಇಷ್ಟವಾಗದ ಅಂಶಗಳ ಬಗ್ಗೆ ತಕರಾರು ಎತ್ತುವುದು ಮತ್ತು ದೂರು ಕೊಡುವುದು ಕನ್ನಡದಲ್ಲೂ ಕಂಡು ಬರಬಹುದೆಂದು ಹೇಳಲಾಗುತ್ತಿದೆ. ಟಿವಿ ಕಾರ್ಯಕ್ರಮ ಎಂದರೆ ಏನು ಬೇಕಾದರೂ ಮಾಡಬಹುದು ಎಂಬ ಭ್ರಮೆಯಲ್ಲಿರುವ ಮಂದಿಗೆ ಇನ್ನು ಮುಂದೆ ಈ ಪ್ರೇಕ್ಷಕ ಜಾಗೃತಿ ಬಹಳಷ್ಟು ನಿರ್ಬಂಧಗಳನ್ನು ಒಡ್ಡಬಹುದು ಎಂದೂ ಮಾಧ್ಯಮ ವೀಕ್ಷಕರು ಊಹಿಸುತ್ತಿದ್ದಾರೆ. 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ